ಬೈಕ್ ಡಿಕ್ಕಿಯಾಗಿ ರೈತನ ಕಾಲು ಮುರಿತ

ಎಲ್ಲೇಮಾಳ ಗ್ರಾಮದ ಬಳಿ ಬೈಕ್ ಡಿಕ್ಕಿಯಿಂದ ಗಾಯಗೊಂಡ ವೆಂಕಯ್ಯ ಅವರನ್ನು ಪೊಲೀಸರು ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಎಲ್ಲೇಮಾಳ ಗ್ರಾಮದ ಬಳಿ ಬೈಕ್ ಡಿಕ್ಕಿಯಿಂದ ಗಾಯಗೊಂಡ ವೆಂಕಯ್ಯ ಅವರನ್ನು ಪೊಲೀಸರು ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
Published on
ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದ ಬಳಿ ಭಾನುವಾರ ಬೈಕ್ ಡಿಕ್ಕಿ ಹೊಡೆದು ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ವೆಂಕಯ್ಯ (65) ಗಾಯಗೊಂಡ ರೈತ. ಇವರು ಮಧ್ಯಾಹ್ನ ಗ್ರಾಮದ ಹೊರ ವಲಯದಲ್ಲಿನ ಜಮೀನಿಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದರು. ಈ ವೇಳೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ರೈತನಿಗೆ ಡಿಕ್ಕಿ ಹೊಡೆದಿದ್ದಾನೆೆ. ಪರಿಣಾಮ ವೆಂಕಯ್ಯ ಕಾಲು ಮುರಿದು ನರಳಾಡುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಹೈವೇ ಪೊಲೀಸರು ಗಾಯಾಳನ್ನು ತಮ್ಮ ವಾಹನದಲ್ಲೇ ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net