ಶರಣರ ಚಿಂತನೆ ಮೈಗೂಡಿಸಿಕೊಳ್ಳಿ

ತಾಲೂಕಿನ ಶ್ರೀ ಕ್ಷೇತ್ರ ಕುಂತೂರು ವೀರಸಿಂಹಾಸನ ಮಠದಲ್ಲಿ ಆಯೋಜಿಸಿದ್ದ ಶನಿವಾರ ಅಲ್ಲಮ ಪ್ರಭು ಜಯಂತಿ ಸಮಾರಂಭದಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಶ್ರೀ ಶಿವಪ್ರಭು ಸ್ವಾಮೀಜಿ, ಶ್ರೀ ಕಂಠಸ್ವಾಮೀಜಿ ಇತರರು ಇದ್ದರು.
ತಾಲೂಕಿನ ಶ್ರೀ ಕ್ಷೇತ್ರ ಕುಂತೂರು ವೀರಸಿಂಹಾಸನ ಮಠದಲ್ಲಿ ಆಯೋಜಿಸಿದ್ದ ಶನಿವಾರ ಅಲ್ಲಮ ಪ್ರಭು ಜಯಂತಿ ಸಮಾರಂಭದಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಶ್ರೀ ಶಿವಪ್ರಭು ಸ್ವಾಮೀಜಿ, ಶ್ರೀ ಕಂಠಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಲಹೆ
ಕೊಳ್ಳೇಗಾಲ: ಶರಣರ ಚಿಂತನೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತುಮಕೂರಿನ ಶ್ರೀ ಕ್ಷೇತ್ರ ಸಿದ್ಧಗಂಗಾಮಠದ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಶ್ರೀ ಕ್ಷೇತ್ರ ಕುಂತೂರು ವೀರಸಿಂಹಾಸನ ಮಠದಲ್ಲಿ ಶನಿವಾರ ಆಯೋಜಿಸಿದ್ದ ಅಲ್ಲಮ ಪ್ರಭು ಜಯಂತಿ ಮತ್ತು 26ನೇ ಪೀಠಾಧಿಕಾರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶರಣರು ಜ್ಞ್ಞಾನದ ಬೆಳಕನ್ನು ಪಡೆಯಬೇಕು. ಕಾಯಕ ನಿಷ್ಠೆಯಲ್ಲಿಯೆ ಕೈಲಾಸ ದೊರೆಯಲಿದೆ. ಈ ಮಾರ್ಗದಲ್ಲಿ ನಾವೆಲ್ಲರೂ ನಡೆದರೆ ಕಾಯಕಕ್ಕೆ ಮಹತ್ವ ದೊರೆಯಲಿದೆ. ಮನುಷ್ಯ ಮನುಷ್ಯನ ನಡುವೆ ಪ್ರೀತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ದೇಶ ಸುಭಿಕ್ಷೆಯಿಂದ ಕೂಡಿರಲು ಸಾಧ್ಯವಾಗಲಿದೆ. ಗಟ್ಟಿಯಾದ ಚಿಂತನ ಶಕ್ತಿ ಇಲ್ಲದಿದ್ದರೆ ವಿಕೋಪ ಎದುರಾಗುತ್ತದೆ. ಮಾನವ ದುಶ್ಚಟಗಳಿಂದ ದೂರ ಉಳಿಯಬೇಕು. ಶರಣರು ತೋರಿಸಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಶ್ರೀ ಕ್ಷೇತ್ರ ಕುಂತೂರು ವೀರಸಿಂಹಾಸನ ಮಠಾಧ್ಯಕ್ಷ ಶ್ರೀ ಶಿವಪ್ರಭು ಸ್ವಾಮೀಜಿ ಮಾತನಾಡಿದರು.
ದಂಡಿಕೆರೆ ಮಠದ ಬಸವಲಿಂಗ ಸ್ವಾಮೀಜಿ, ನೆರಗ್ಯಾತನಹಳ್ಳಿ ವಿರಕ್ತ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಕೆಸ್ತೂರು ಮಠದ ತೋಂಟದಾರ್ಯ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀ ಕಂಠಸ್ವಾಮೀಜಿ, ಚಿಲಕವಾಡಿ ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ ವಿವಿಧ ಮಠದ ಹರಗೂರು ಚರಮೂರ್ತಿಗಳು, ಶಿಕ್ಷಕ ತೋಂಟದಾರ್ಯ, ಗಿರೀಶ್, ಎಪಿಎಂಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಮುಖಂಡರಾದ ಶಿವಕುಮಾರ್, ವೃಷಬೇಂದ್ರ, ನಿವೃತ್ತ ಶಿಕ್ಷಕ ರಾಜಶೇಖರ್, ಗ್ರಾಮದ ಗೌಡರು ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net