ಯುವಸಮೂಹ ರಕ್ತದಾನಕ್ಕೆ ಒತ್ತು ನೀಡಲಿ

ಕೊಳ್ಳೇಗಾಲದ ಪತಂಜಲಿ ಯೋಗ ಮಂದಿರದಲ್ಲಿ ಬುಧವಾರ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು. ಸತ್ಯಣ್ಣ, ಎಸ್.ಶಶಿಕುಮಾರ್, ಡಾ.ಪ್ರಿಯದರ್ಶಿನಿ, ಡಾ.ತೀರ್ಥ, ಸೌಮ್ಯಾ ಇದ್ದರು.
ಕೊಳ್ಳೇಗಾಲದ ಪತಂಜಲಿ ಯೋಗ ಮಂದಿರದಲ್ಲಿ ಬುಧವಾರ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ದಾನಿಗಳು ರಕ್ತದಾನ ಮಾಡಿದರು. ಸತ್ಯಣ್ಣ, ಎಸ್.ಶಶಿಕುಮಾರ್, ಡಾ.ಪ್ರಿಯದರ್ಶಿನಿ, ಡಾ.ತೀರ್ಥ, ಸೌಮ್ಯಾ ಇದ್ದರು.
Published on
ಕೊಳ್ಳೇಗಾಲ: ರಕ್ತದಾನ ಅಮೂಲ್ಯವಾದ ಜೀವ ಉಳಿಸುವುದಕ್ಕೆ ಸಹಕಾರಿಯಾಗಿದೆ. ಯುವ ಸಮುದಾಯ ರಕ್ತದಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಚಾಮರಾಜನಗರ ವೈದ್ಯಕೀಯ ಸಂಸ್ಥೆಗಳ ರಕ್ತನಿಧಿ ಘಟಕದ ಹಿರಿಯ ತಂತ್ರಜ್ಞ ಸತ್ಯಣ್ಣ ಹೇಳಿದರು.
ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಬುಧವಾರ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ನಮ್ಮ ದೇಹಕ್ಕೆ ಹಲವು ಪ್ರಯೋಜನ ನೀಡುತ್ತದೆ. ರಕ್ತ ಶುದ್ಧಗೊಳ್ಳುವಿಕೆ, ರಕ್ತದ ಮರು ಉತ್ಪತ್ತಿ ಸಾಮರ್ಥ್ಯ ಅಭಿವೃದ್ಧಿ ಆಗಲಿದೆ. ಪ್ರತಿವರ್ಷವೂ ಲಕ್ಷಾಂತರ ಯೂನಿಟ್ ರಕ್ತದ ಕೊರತೆ ಎದುರಾಗಲಿದೆ. ಹಾಗಾಗಿ ಇಂತಹ ಶಿಬಿರಗಳು ಜೀವ ಉಳಿಸಲು ನೆರವಾಗಲಿದೆ. ಆರೋಗ್ಯವಂತ ವ್ಯಕ್ತಿಗಳು, ವಿಶೇಷವಾಗಿ ಯುವ ಜನತೆ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬರ ರಕ್ತದಾನದಿಂದ ಕನಿಷ್ಠ ಮೂವರ ಪ್ರಾಣ ಉಳಿಸಬಹುದು. ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕೆಂದರು. ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ಶಿಬಿರ ನಡೆಯಿತು. 49 ಜನರು ರಕ್ತದಾನ ಮಾಡಿದರು.
ಚಾಮರಾಜನಗರ ವೈದ್ಯಕೀಯ ಸಂಸ್ಥೆಗಳ ರಕ್ತನಿಧಿ ಘಟಕದ ವೈದ್ಯಕೀಯ ತಂಡದ ಡಾ.ಪ್ರಿಯದರ್ಶಿನಿ, ಡಾ.ತೀರ್ಥ, ಹಿರಿಯ ಶುಶ್ರೂಷಕಿ ಸೌಮ್ಯಾ, ಮಂಗಳಮ್ಮ, ರಕ್ತನಿಧಿ ಕೇಂದ್ರದ ಆಪ್ತ ಸಮಾಲೋಚಕ ಅಜ್ಗರ್ ಅಹಮ್ಮದ್, ಮಹದೇವಸ್ವಾಮಿ, ತಂತ್ರಜ್ಞರಾದ ಮೌನೀಶ್, ಕೃಷ್ಣಮೂರ್ತಿ, ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net