ಪೊನ್ನಾಚಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುರ್ಚಿವಿತರಿಸಲಾಯಿತು. ಶಿವಬಸಪ್ಪ, ಮಹದೇವಸ್ವಾಮಿ, ಮುನಿಮಾದಮ್ಮ, ಸಿದ್ದಮಾದಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪೊನ್ನಾಚಿ ಗ್ರಾಮ
ಅಂಗನವಾಡಿ ಕೇಂದ್ರ
ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತಾಲೂಕು ಸೋಲಿಗ ಅಭಿವೃದ್ಧಿ ಸಂಘ ಹಾಗೂ ಐಪಿಎಚ್ ಐಕ್ಯತೆ ಪ್ರಾಜೆಕ್ಟ್ ವತಿಯಿಂದ ಕುರ್ಚಿಗಳನ್ನು ವಿತರಿಸಲಾಯಿತು.
ಸಂಘದ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಚಿತ್ರಕಲೆ, ಗೋಡೆ ಬರಹ ಬರೆಸಲಾಗಿತ್ತಲ್ಲದೆ ಮಕ್ಕಳಿಗೆ ಅಗತ್ಯವಾದ ಕಪ್ಪುಹಲಗೆ ಹಾಗೂ ಕುರ್ಚಿಗಳನ್ನು ವಿತರಿಸಲಾಯಿತು.
ಸೋಲಿಗ ಅಭಿವೃದ್ಧಿ ಸಂಘದ ಸಂಯೋಜಕ ಮಹದೇವಸ್ವಾಮಿ ಮಾತನಾಡಿ, ಕಾಡಂಚಿನಲ್ಲಿರುವ ಪೊನ್ನಾಚಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಶಾಲಾ ಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದು, ಕಲಿಕೆಯಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸುತ್ತಿದ್ದಾರೆ. ಆದರೆ ಅಗತ್ಯ ಮೂಲ ಸೌಕರ್ಯವಿರಲಿಲ್ಲ. ಇದನ್ನು ಮನಗಂಡು ಐಪಿಎಚ್ ಐಕ್ಯತೆ ಪ್ರಾಜೆಕ್ಟ್ ಹಾಗೂ ಸಂಘದ ವತಿಯಿಂದ ಮಕ್ಕಳ ಕಲಿಕೆಗೆ ಅನೂಕೂಲ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲೆ ಗೋಡೆ ಬರಹ ಬರೆಸಲಾಗಿದೆ. ಜತೆಗೆ ಕಪ್ಪುಹಲಗೆ ಹಾಗೂ ಆಕರ್ಷಕ ಕುರ್ಚಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಮುಖಂಡರಾದ ಶಿವಬಸಪ್ಪ, ರಾಜಪ್ಪ, ಮುನಿರಾಜು, ಸಣ್ಣಪ್ಪ, ಮಣಿ, ಮುನಿಮಾದಮ್ಮ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸಿದ್ದಮಾದಮ್ಮ ಇತರರು ಇದ್ದರು.