ಕಿಡಿಗೇಡಿಗಳ ವಿರುದ್ಧ ಬಿಗಿ ಕ್ರಮಕ್ಕೆ ಆಗ್ರಹ

ಮಸಣಪುರ ಮತ್ತು ಹೊಂಗನೂರು ಗ್ರಮದಲ್ಲಿ ಡಾ.ಅಂಬೇಡ್ಕರ್ ಅವರ ನಾಮಫಲಕಕ್ಕೆ ಅಪಮಾನವೆಸಗಿರುವ ಕಿಡಿಗೇಡಿಗಳನ್ನು ಗಡಿ ಪಾರು ಮಾಡಬೇಕೆಂದು ಆಗ್ರಹಿಸಿ ಕೊಳ್ಳೇಗಾಲ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಶನಿವಾರ ಮುಸ್ಲಿಂರು ಪ್ರತಿಭಟನೆ ನಡೆಸಿದರು. ಇರ್ಫಾನ್, ಮಹಮದ್ ಮತೀನ್, ಏಜಾಜ್, ಆಶೀಫ್, ರಿಜ್ವಾನ್ ಇತರರು ಇದ್ದರು.

Published on
ಕೊಳ್ಳೇಗಾಲ: ಮಸಣಪುರ ಮತ್ತು ಹೊಂಗನೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ನಾಮಫಲಕಕ್ಕೆ ಅಪಮಾನ ಎಸಗಿರುವ ಕಿಡಿಗೇಡಿಗಳನ್ನು ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಮುಸ್ಲಿಂ ಮುಖಂಡರು ಸಾಕೇಂತಿಕವಾಗಿ ಪ್ರತಿಭಟನೆ ನಡೆಸಿದರು.
ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೇರಿದ ಪ್ರತಿಭಟನಾಕಾರರು ಅಂಬೇಡ್ಕರ್ ಅವರ ನಾಮ ಫಲಕಕ್ಕೆ ಅಪಮಾನ ಎಸಗಿರುವವರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ಮಹಮದ್ ಮತೀನ್ ಮಾತನಾಡಿ, ಮಸಣಪುರ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ನಾಮಫಲಕಕ್ಕೆ ಅಪಮಾನವೆಸಗಿದ್ದ ಘಟನೆ ಮಾಸುವ ಮುನ್ನವೇ ಹೊಂಗನೂರಿನಲ್ಲೂ ಮರುಕಳಿಸಿದೆ. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಬಂದ್ ಆಚರಿಸಲಾಗುದುವುದು ಎಂದು ಎಚ್ಚರಿಸಿದರು.

ಎಸ್‌ಡಿಪಿಐ ಸಂಘಟನೆ ಟೌನ್ ಅಧ್ಯಕ್ಷ ಇಮ್ರಾನ್ ಮಾತನಾಡಿ, ರಾಷ್ಟ್ರ ನಾಯಕ ಡಾ.ಅಂಬೇಡ್ಕರ್ ಅವರ ನಾಮ ಫಲಕಕ್ಕೆ ಅಪಮಾನ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವುದರ ಜತೆಗೆ ಇತರರಿಗೂ ಎಚ್ಚರಿಕೆ ಪಾಠವಾಗಬೇಕು. ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಇರ್ಫಾನ್, ಮಹಮದ್ ಮತೀನ್, ಏಜಾಜ್, ಆಶೀಫ್, ರಿಜ್ವಾನ್, ಇಮ್ರಾನ್, ನಂದಿಮ್, ಅಕ್ಮಲ್ ಪಾಷ, ಇಸ್ಮಾಯಿಲ್, ಶರೀಫ್, ಸರ್ದಾರ್, ವಸೀಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net