ಶೀಲವಂತಪುರದಲ್ಲಿ ಕೆರೆ ಏರಿ ಒಡೆದು ಬೆಳೆ ನಷ್ಟ

ಗುಂಡ್ಲುಪೇಟೆ ತಾಲೂಕಿನ ಶೀಲವಂತಪುರ ಗ್ರಾಮದಲ್ಲಿ ಕೆರೆ ಏರಿ ಒಡೆದು ಅರಿಶಿಣ ಬೆಳೆಯನ್ನು ಆವರಿಸಿರುವುದು.
ಗುಂಡ್ಲುಪೇಟೆ ತಾಲೂಕಿನ ಶೀಲವಂತಪುರ ಗ್ರಾಮದಲ್ಲಿ ಕೆರೆ ಏರಿ ಒಡೆದು ಅರಿಶಿಣ ಬೆಳೆಯನ್ನು ಆವರಿಸಿರುವುದು.
Published on
ಗುಂಡ್ಲುಪೇಟೆ: ತಾಲೂಕಿನ ಶೀಲವಂತಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಕೆರೆ ತುಂಬಿ ಏರಿ ಒಡೆದು ರೈತರು ಬೆಳೆದಿದ್ದ ಬೆಳೆಗಳು ನಾಶವಾಗಿವೆ.
ಶೀಲವಂತಪುರ ಗ್ರಾಮದಲ್ಲಿ ರಾಮಯ್ಯನಕಟ್ಟೆಯ ಏರಿ ಒಡೆದು ಹೊರ ನುಗ್ಗಿದ ಕೆಸರು ಮಿಶ್ರಿತ ಮಣ್ಣು ಸಮೀಪದ ರಾಜಶೇಖರಮೂರ್ತಿ ಅವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅರಿಶಿಣ ಬೆಳೆಯನ್ನು ಸಂಪೂರ್ಣ ಆವರಿಸಿಕೊಂಡಿದೆ. ಇದರಿಂದ ನಷ್ಟ ಸಂಭವಿಸಿದೆ. ಡಿ.ಎಸ್.ಶಿವಸ್ವಾಮಿ ಅವರ ಜಮೀನಿನಲ್ಲಿ ಭಾರಿ ಕೊರಕಲು ಮಾಡಿ ಜೋಳ ಮತ್ತೆ ಬಾಳೆ ಬೆಳೆ ಕೊಚ್ಚಿಕೊಂಡು ಹೋಗಿವೆ. ಕೆರೆಯ ಅಕ್ಕಪಕ್ಕದ ಜಮೀನುಗಳಲ್ಲಿ ಭಾರಿ ಪ್ರಮಾಣದ ನೀರು ಹರಿದ ಪರಿಣಾಮ ಮಣ್ಣೆಲ್ಲ ಕೊಚ್ಚಿಕೊಂಡುಹೋಗಿದೆ.
ಮಳೆಯಿಂದ ಬೆಳೆನಾಶವಾದ ಜಮೀನುಗಳಿಗೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಭೇಟಿ ನೀಡಿ ವೀಕ್ಷಿಸಿ ರೈತರಿಗೆ ಸಾಂತ್ವನ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net