ಗುಂಬಳ್ಳಿ ಕಟ್ಟೆಯಲ್ಲಿ ಮೊಸಳೆ ಪತ್ಯೇಕ್ಷ

ಯಳಂದೂರು ತಾಲೂಕಿನ ಅಪಾಲಕಟ್ಟೆಯಲ್ಲಿ ಸೋಮವಾರ ಕಾಣಿಸಿಕೊಂಡಿದೆ ಎನ್ನಲಾದ ಮೊಸಳೆಯ ಚಿತ್ರ.
ಯಳಂದೂರು ತಾಲೂಕಿನ ಅಪಾಲಕಟ್ಟೆಯಲ್ಲಿ ಸೋಮವಾರ ಕಾಣಿಸಿಕೊಂಡಿದೆ ಎನ್ನಲಾದ ಮೊಸಳೆಯ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಆತಂಕಕ್ಕೀಡಾಗಿರುವ ಸಾರ್ವಜನಿಕರು
ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿರುವ ಅಪಾಲ ಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.
ಸೋಮವಾರ ಬೆಳಗ್ಗೆ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ರಸ್ತೆಯಲ್ಲೇ ಇರುವ ಈ ಕಟ್ಟೆಯಲ್ಲಿ ಮೊಸಳೆ ಇದ್ದದ್ದನ್ನು ಬೆಟ್ಟಕ್ಕೆ ತೆರಳುತ್ತಿದ್ದ ಪ್ರವಾಸಿಗರು ಮೊದಲಿಗೆ ನೋಡಿದ್ದಾರೆ. ನಂತರ ಇದನ್ನು ಕೆಲ ಸ್ಥಳೀಯರ ಗಮನಕ್ಕೆ ತಂದಿದ್ದಾರೆ. ಕಟ್ಟೆಯಲ್ಲಿ ನೀರು ತುಂಬಿದ್ದು ಇದರಲ್ಲಿ ಮೊಸಳೆಯು ಈಜುತ್ತಿದ್ದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅಲ್ಲದೆ ಹಲವರು ಇದನ್ನು ಕಂಡಿರುವುದಾಗಿ ಮಾಹಿತಿ ನೀಡಿದ್ದಾರೆ
.
ಆದರೆ ಈ ಕಟ್ಟೆಗೆ ಬೃಹತ್ ಗಾತ್ರದ ಮೊಸಳೆ ಬಂದಿರುವುದು ಹೇಗೆ? ಎಂಬುದು ಅಚ್ಚರಿ ಮೂಡಿಸಿದೆ. ಈಗ ಕಾಲುವೆಯಲ್ಲೂ ನೀರು ಹರಿಯುತ್ತಿಲ್ಲ. ಇಲ್ಲಿಗೆ ನದಿಗಳು ಹತ್ತಿರದಲ್ಲಿ ಇಲ್ಲ. ಮೊಸಳೆ ಹೇಗೆ ಬಂತು ಎಂಬ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯ ಇರುವಿಕೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಸ್ಥಳಕ್ಕೆ ಸಿಬ್ಬಂದಿ ಕಳುಹಿಸಿ, ಪರಿಶೀಲಿಸುವುದಾಗಿ ಎಂದು ಎಸಿಎಫ್ ಮಹಾಲಕ್ಷ್ಮೀಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net