ವೀರನಪುರ ಡೇರಿಗೆ ಚಿದಾನಂದಸ್ವಾಮಿ ಅಧ್ಯಕ್ಷ

ಗುಂಡ್ಲುಪೇಟೆ  ತಾಲೂಕಿನ ವೀರನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು. ಚಿದಾನಂದಸ್ವಾಮಿ, ಶಿವಣ್ಣ, ಗುರುಪ್ರಸಾದ್ ಇದ್ದರು.
ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು ಅಭಿನಂದಿಸಿದರು. ಚಿದಾನಂದಸ್ವಾಮಿ, ಶಿವಣ್ಣ, ಗುರುಪ್ರಸಾದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷರಾಗಿ ಪಂಜನಹಳ್ಳಿ ಶಿವಣ್ಣ ಆಯ್ಕೆ
ಗುಂಡ್ಲುಪೇಟೆ: ತಾಲೂಕಿನ ವೀರನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ನಾ.ಚಿದಾನಂದಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಪಂಜನಹಳ್ಳಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರು.
ತೆರವಾದ ಎರಡೂ ಸ್ಥಾನಗಳಿಗೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚಿದಾನಂದ, ಉಪಾಧ್ಯಕ್ಷ ಸ್ಥಾನಕ್ಕೆ ಪಂಜನಹಳ್ಳಿ ಶಿವಣ್ಣ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್.ನಾಗೇಶ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನಿರ್ದೇಶಕರಾದ ವಿ.ಬಿ.ಬಸವಣ್ಣ, ವಿ.ಎಸ್.ಗುರುಪ್ರಸಾದ್, ಗುರುಮಲ್ಲಪ್ಪ, ಕುಮಾರ್, ಮಂಜು, ಅಂದಲೇಗೌಡ, ಮಹೇಶ್ವರಿ, ಪುಟ್ಟನಂಜಮ್ಮ, ವಿ.ಜಿ.ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net