ಕೋಳಿಪಾಳ್ಯ ಆಶ್ರಮ ಶಾಲೆಯಲ್ಲಿ ಪರಿಸರ ಜಾಗೃತಿ

ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಬುಡಕಟ್ಟು ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಂ.ಸೋಮಣ್ಣ, ಶಿವಣ್ಣ, ಮಹೇಶ್, ಸುವರ್ಣಮ್ಮ, ಪ್ರಭುಸ್ವಾಮಿ, ಶ್ವೇತಾ ಇನ್ನಿತರರಿದ್ದರು.
ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಬುಡಕಟ್ಟು ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಂ.ಸೋಮಣ್ಣ, ಶಿವಣ್ಣ, ಮಹೇಶ್, ಸುವರ್ಣಮ್ಮ, ಪ್ರಭುಸ್ವಾಮಿ, ಶ್ವೇತಾ ಇನ್ನಿತರರಿದ್ದರು.
Published on
ಚಾಮರಾಜನಗರ: ಭಗವಾನ್ ಬಿರ್ಸಾಮುಂಡ ಅವರ ಜಯಂತಿ ಪ್ರಯುಕ್ತ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಪರಿಸರ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ತಾಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ ಗಿಡ ನೆಡುವ ಮೂಲಕ ಪ್ರತಿ ವಿದ್ಯಾರ್ಥಿಗಳಿಗೆ ಗಿಡ ಪೋಷಣೆಯ ಉಸ್ತುವಾರಿ ವಹಿಸಿ ವಿದ್ಯಾರ್ಥಿಗಳ ನಾಮಫಲಕಗಳನ್ನು ಗಿಡಗಳಿಗೆ ಹಾಕಲಾಯಿತು. ಸೋಲಿಗ ಸಮುದಾಯದ ಯುವ ಮುಖಂಡ ಶಿವಣ್ಣ ಹಾಗೂ ಮಹೇಶ್ ಅವರು ಭಾಗವಹಿಸಿ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ಎಂ.ಸೋಮಣ್ಣ ಮಾತನಾಡಿ, ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಸಿ ಪ್ರತಿಯೊಂದು ಶಾಲೆಯಲ್ಲಿ ಉತ್ತಮವಾದ ಉದ್ಯಾನ ಮಾಡಬೇಕು. ಪರಿಸರದ ಬಗ್ಗೆ ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಹಾಗೂ ತಾಲೂಕು ಕಲ್ಯಾಣಾಧಿಕಾರಿ ಅವರ ಮಾರ್ಗದರ್ಶನದಂತೆ ಶಾಲೆಯಲ್ಲಿ ಉತ್ತಮ ಕೈತೋಟ ಮಾಡಬೇಕು. ಇದಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಕರಾದ ಸುವರ್ಣಮ್ಮ, ಪ್ರಭುಸ್ವಾಮಿ, ಶ್ವೇತಾ ಮತ್ತು ಭೂಮಿಕಾ, ಸಿಬ್ಬಂದಿ ಮಹದೇವ, ಕಾರಯ್ಯ, ಮಹದೇವಮ್ಮ, ಕಲಾವತಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net