ಬಸ್-ಆಟೋ ಡಿಕ್ಕಿಯಾಗಿ ಯುವಕ ಸಾವು

 ಎಂ.ಜಿ.ದೊಡ್ಡಿ ಬಳಿ ಸಂಭವಿಸಿದ ಅಪಘಾತದಿಂದ ಆಟೋ ಜಖಂಗೊಂಡಿರುವುದು.
ಎಂ.ಜಿ.ದೊಡ್ಡಿ ಬಳಿ ಸಂಭವಿಸಿದ ಅಪಘಾತದಿಂದ ಆಟೋ ಜಖಂಗೊಂಡಿರುವುದು.
Published on
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಂ.ಜಿ.ದೊಡ್ಡಿ ಬಳಿ ಗುರುವಾರ ಕೆಎಸ್‌ಆರ್‌ಟಿಸಿ ಹಾಗೂ ಆಟೋ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದ ಮೋಕ್ಷಿತ್ (21) ಮೃತರು. ಈತ ಹೊಸ ವರ್ಷದ ಹಿನ್ನೆಲೆಯಲ್ಲಿ ಸ್ನೇಹಿತರಾದ ತರುಣ್ ಹಾಗೂ ಕುಶಾಲ್ ಅವರೊಂದಿಗೆ ಮಧ್ಯಾಹ್ನ 3ರ ವೇಳೆಯಲ್ಲಿ ತಮ್ಮ ಪ್ಯಾಸೇಂಜರ್ ಆಟೋದಲ್ಲಿ ಮ.ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಎಂ.ಜಿ.ದೊಡ್ಡಿಯ ಪೆಟ್ರೋಲ್ ಬಂಕ್ ಬಳಿ ಎದುರಿನಿಂದ ಬಂದ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಮೂವರು ಗಾಯಗೊಂಡಿದ್ದರು. ಸ್ಥಳಕ್ಕಾಗಮಿಸಿದ ಹೈವೇ ಪೆಟ್ರೋಲ್ ಪೊಲೀಸರು ತೀವ್ರ ಗಾಯಗೊಂಡಿದ್ದ ಮೋಕ್ಷಿತ್‌ನನ್ನು ತುರ್ತು ವಾಹನದ ಮೂಲಕ ಕಾಮಗೆರೆ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಆದರೆ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಣ್ಣಪುಟ್ಟ ಗಾಯವಾಗಿದ್ದ ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಮಾಪುರ ಪೊಲೀಸರು ಜಖಂಗೊಂಡಿದ್ದ ಬಸ್ ಹಾಗೂ ಆಟೋ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net