ಪೌರಾಯುಕ್ತ ರುದ್ರಮ್ಮ ಶರಣಯ್ಯ ಅಧಿಕಾರ ಸ್ವೀಕಾರ

ಕೊಳ್ಳೇಗಾಲ ನಗರಸಭೆಯ ನೂತನ ಪೌರಾಯುಕ್ತರಾಗಿ ರುದ್ರಮ್ಮ ಶರಣಯ್ಯ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.
ಕೊಳ್ಳೇಗಾಲ ನಗರಸಭೆಯ ನೂತನ ಪೌರಾಯುಕ್ತರಾಗಿ ರುದ್ರಮ್ಮ ಶರಣಯ್ಯ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.
Published on
ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯ ನೂತನ ಪೌರಾಯುಕ್ತರಾಗಿ ರುದ್ರಮ್ಮ ಶರಣಯ್ಯ ಗುರುವಾರ ಅಧಿಕಾರ ವಹಿಸಿಕೊಂಡರು.
ನಗರಸಭೆ ಕಾರ್ಯಾಲಯಕ್ಕೆ ರುದ್ರಮ್ಮ ಶರಣಯ್ಯ ಅವರು ಭೇಟಿ ನೀಡಿದ ವೇಳೆ ನಗರಸಭೆ ವ್ಯವಸ್ಥಾಪಕ ಲಿಂಗರಾಜು, ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ನೂತನ ಪೌರಾಯುಕ್ತರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.
ಈ ವೇಳೆ ನಗರಸಭೆ ಪೌರಾಯುಕ್ತೆ ರುದ್ರಾಂಬ ಶರಣಯ್ಯ ಮಾತನಾಡಿ, ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ಅಭಿವೃದ್ಧಿ ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ರಾದ ರಾಘವೇಂದ್ರ, ಜಯಮೇರಿ, ಬಿಲ್ ಕಲೆಕ್ಟರ್ ಪ್ರಭಾಕರ್, ಇಂಜಿನಿಯರ್ ನಾಗೇಂದ್ರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net