ವಡಕೆಹಳ್ಳದಲ್ಲಿ ಕೈಗೊಂಡಿರುವ ರೈತರ ಆಹೋ ರಾತ್ರಿ ಧರಣಿಯಲ್ಲಿ ಚಚ್ ಫಾದರ್‌ಗಳಾದ ವಿನ್ಸೆಂಟ್, ಪ್ರಕಾಶ್ ಹಾಗೂ ಮಹಿಳೆಯರು ಭಾಗಿಯಾಗಿ ಬೆಂಬಲ ಸೂಚಿಸಿದರು. ಅರ್ಪುದರಾಜ್, ಲೂರ್ದುಸ್ವಾಮಿ, ಸಗಾಯಿಮೇರಿ, ಶಾಂತಿ ಇತರರು ಇದ್ದರು.
ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ಆರಂಭಿಸಿರುವ ಅಹೋರಾತ್ರಿ ಧರಣಿ 16ನೇ ದಿನವಾದ ಮಂಗಳವಾರವೂ ಮುಂದುವರಿದಿದ್ದು, ಮಾರ್ಟಳ್ಳಿ ಚರ್ಚ್‌ನ ಧರ್ಮಗುರುಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿಯಿಂದ ಕಳೆದ 16 ದಿನಗಳಿಂದಲೂ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸಂಘ ಸಂಸ್ಥೆಗಳು, ವಿವಿಧ ಚರ್ಚ್ ಫಾದರ್, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡುತ್ತಿದ್ದಾರೆ. ಆದರೂ ಸಂಬಂಧಪಟ್ಟವರು ಸ್ಥಳಕ್ಕಾಗಮಿಸಿ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಮಂಗಳವಾರ ಮಾರ್ಟಳ್ಳಿ ಚರ್ಚ್‌ನ ಧರ್ಮಗುರುಗಳಾದ ಡಾ.ಎಂ. ವಿನ್ಸೆಂಟ್, ಪ್ರಕಾಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಕಾರ್ಯದರ್ಶಿ ಲೂರ್ದುಸ್ವಾಮಿ, ಮಾಜಿ ಸೈನಿಕ ಜೋಸೆಫ್, ರೈತ ಮುಖಂಡರಾದ ದಿವ್ಯಾನಂದ, ಜಪಮಾಲೆ, ರಜಿನಾ ಮೇರಿ, ಸಗಾಯಿ ಮೇರಿ, ಪ್ರೇಮಾ, ಬೇಬಿ, ಶಾಂತಿ ಹಾಗೂ ಇನ್ನಿತರರು ಇದ್ದರು.