ಬದುಕಿನ ಮೌಲ್ಯ ಸಾಕ್ಷಾತ್ಕರಿಸುವ ಭಗವದ್ಗೀತೆ

ಚಾಮರಾಜನಗರದ ಋಗ್ವೇದಿ ಕುಟೀರದಲ್ಲಿ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಚಿತ್ರಪಟಕ್ಕೆ ಬಿ.ಕೆ.ದಾನೇಶ್ವರಿ ಪುಷ್ಪಾರ್ಚನೆ ನೆರವೇರಿಸಿದರು. ಸುರೇಶ್ ಋಗ್ವೇದಿ, ಆರಾಧ್ಯ, ನಾಗರಾಜು, ಶ್ರಾವ್ಯಾ ಮತ್ತಿತರರಿದ್ದರು.
ಚಾಮರಾಜನಗರದ ಋಗ್ವೇದಿ ಕುಟೀರದಲ್ಲಿ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಚಿತ್ರಪಟಕ್ಕೆ ಬಿ.ಕೆ.ದಾನೇಶ್ವರಿ ಪುಷ್ಪಾರ್ಚನೆ ನೆರವೇರಿಸಿದರು. ಸುರೇಶ್ ಋಗ್ವೇದಿ, ಆರಾಧ್ಯ, ನಾಗರಾಜು, ಶ್ರಾವ್ಯಾ ಮತ್ತಿತರರಿದ್ದರು.
Published on
ಚಾಮರಾಜನಗರ: ಭಗವದ್ಗೀತೆ ಮಾನವನ ಬದುಕಿನ ಮೌಲ್ಯವನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಇರುವ ಅಮೂಲ್ಯವಾದ ಗ್ರಂಥ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ದಾನೇಶ್ವರಿ ತಿಳಿಸಿದರು.
ನಗರದ ಋಗ್ವೇದಿ ಕುಟೀರದಲ್ಲಿ ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಚಿತ್ರಪಟಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಭಾರತೀಯ ಸನಾತನ ಧರ್ಮದಲ್ಲಿ ಅಮೂಲ್ಯವಾದ ಶ್ರೇಷ್ಠ ಗ್ರಂಥ ಭಗವದ್ಗೀತೆ. ಡಿ.1ಭಗವದ್ಗೀತಾ ದಿನವನ್ನು ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ವಾಣಿಯಾದ ಭಗವದ್ಗೀತೆ ಮಾನವನ ಬದುಕಿನ ಮೌಲ್ಯವನ್ನು ಉನ್ನತಿಗೊಳಿಸಿ ಶ್ರೇಷ್ಠ ಸಾಧಕರಾಗಿ ಬದುಕಲು ಸಾಧ್ಯವಿದೆ. ಭಗವದ್ಗೀತೆಯನ್ನು ಪ್ರತಿನಿತ್ಯ ಪಠಿಸಿದಾಗ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಮನಸು ಶಕ್ತಿಯುತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಚೈತನ್ಯ ಶಕ್ತಿಯನ್ನು ನೀಡುತ್ತದೆ. ಭಗವದ್ಗೀತೆ ಮನೋಬಲದ ಶ್ರೇಷ್ಠ ಗ್ರಂಥ ಎಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಗೀತಾ ಜಯಂತಿ ಇಡೀ ಜಗತ್ತಿನಲ್ಲಿ ಆಚರಿಸುತ್ತಿರುವ ದಿನವಾಗಿದೆ. ಭಗವದ್ಗೀತೆ ಇಡೀ ಜಗತ್ತಿನ ಮಾನವ ಕುಲದ ಶ್ರೇಷ್ಠ ಗ್ರಂಥ. ಪ್ರತಿ ಮಾನವನು ಜಾತಿ ಮತ ಭೇದವಿಲ್ಲದೆ ಅಧ್ಯಯನ ಮಾಡಬೇಕು.
ಮಾನವ ಜನಾಂಗದ ಕಲ್ಯಾಣಕ್ಕೆ ಇರುವ ಏಕೈಕ ಗ್ರಂಥ ಭಗವದ್ಗೀತೆ. ಭಗವದ್ಗೀತೆಯ ಸಾರವು ಸಮಗ್ರ ಮನಃಶಾಸ್ತ್ರದ ಗ್ರಂಥವಾಗಿದೆ. ಮನುಷ್ಯ ಬದುಕಲು ಮನಸ್ಸು ಬಹಳ ಮುಖ್ಯ. ಮನಸ್ಸಿನಿಂದಲೇ ಮಾನವನ ಸಮಗ್ರ ವಿಕಾಸ. ಕೆಟ್ಟ ಆಲೋಚನೆಗಳು ಮನಸ್ಸಿನ ದುರ್ಬಲತೆಯಿಂದ ಅರಳುತ್ತವೆ. ಕೆಟ್ಟತನವನ್ನು ಹೋಗಲಾಡಿಸಿಕೊಳ್ಳಲು ಮನಸ್ಸು ಶಕ್ತಿಯುತವಾಗಲು ಭಗವದ್ಗೀತೆ ಅಂತಹ ಗ್ರಂಥ ಮುಖ್ಯವೆಂದರು. ಭಗವದ್ಗೀತೆಯ ಅಧ್ಯಯನದಿಂದ ಮನಸ್ಸು ಗಟ್ಟಿಯಾಗುತ್ತದೆ. ಭಗವದ್ಗೀತೆಯ ಪ್ರತಿ ಶಬ್ದವು ಅಮೂಲ್ಯವಾದದ್ದು ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಆರಾಧ್ಯ ಮಾತನಾಡಿದರು. ಜೈ ಹಿಂದ್ ಪ್ರತಿಷ್ಠಾನದ ಕುಸುಮಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನಾಗರಾಜು, ಶ್ರಾವ್ಯಾ ಋಗ್ವೇದಿ, ಆಶಾ, ಪೂಜಾ, ವಿಜಯ, ಸುಂದರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net