ಅಂಚೆ ಕಚೇರಿಗೆ ನೂರರ ಸಂಭ್ರಮ

ಕೊಳ್ಳೇಗಾಲ ಉಪ ಅಂಚೆ ಕಚೇರಿ ಕಟ್ಟಡ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಚೇರಿ ನೌಕರರು ಹಾಗು ಏಜೆಂಟರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಶತಮಾನೋತ್ಸವ ಆಚರಣೆ ಮಾಡಿದರು.
ಕೊಳ್ಳೇಗಾಲ ಉಪ ಅಂಚೆ ಕಚೇರಿ ಕಟ್ಟಡ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಚೇರಿ ನೌಕರರು ಹಾಗು ಏಜೆಂಟರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಶತಮಾನೋತ್ಸವ ಆಚರಣೆ ಮಾಡಿದರು.
Published on
ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಉಪ ಅಂಚೆ ಕಚೇರಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂಚೆ ಕಚೇರಿ ನೌಕರರು ಸೋಮವಾರ ಶತಮಾನಸೋತ್ಸವ ಆಚರಣೆ ಮಾಡಿದರು.
ಕಾರ್ಯಕ್ರಮಕ್ಕೆ ಕೊಳ್ಳೇಗಾಲ ಪ್ರಧಾನ ಅಂಚೆ ಕಚೇರಿಯ ಪಾಲಕ ಆರ್.ಮನಮೋಹನ್ ಚಾಲನೆ ನೀಡಿದ ಬಳಿಕ ಮಾತನಾಡಿ, ಕೊಳ್ಳೇಗಾಲ ಉಪ ಅಂಚೆ ಕಚೇರಿ 1925 ಡಿ.1 ರಂದು ಆರಂಭಗೊಂಡಿದ್ದು 2025 ಡಿ.1ಕ್ಕೆ 100 ವರ್ಷ ತುಂಬಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಈ ಕಚೇರಿ ಕೊಳ್ಳೇಗಾಲದ ನಾಗರಿಕರಿಗೆ ಉತ್ತಮ ಸೇವೆ ನೀಡಿದೆ. ಕಚೇರಿಯಲ್ಲಿ ನೂರೂರು ನೌಕರರು ಮತ್ತು ಸಿಬ್ಬಂದಿ ಜೀವನ ಕಟ್ಟಿಕೊಂಡಿದ್ದಾರೆ. 100 ವಸಂತಗಳನ್ನು ತುಂಬಿದ ಅಂಚೆ ಕಚೇರಿ ಕಟ್ಟಡದಲ್ಲಿ ವ್ಯವಹರಿಸಿದ ಹಾಗೂ ಕೆಲಸ ಮಾಡಿದ ಎಲ್ಲರಿಗೂ ಒಳಿತಾಗಲಿ ಎಂದರು.
ಅಂಚೆ ಕಚೇರಿ ಪ್ರತಿನಿಧಿ ಜಗದಾಂಬ ಮಾತನಾಡಿ, 1853 ರಿಂದ ಅಂಚೆ ಸೇವೆ ಆರಂಭಗೊಂಡಿದ್ದು. 1996 ರಿಂದ ಅಂಚೆ ಕಚೇರಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ 100 ವರ್ಷ ತುಂಬಿದ ಕಟ್ಟಡ ಕೆಲಸ ಮಾಡಲು ಅವಕಾಶ ನೀಡಿ ಅನ್ನ ನೀಡಿದೆ ಎಂದರು.
ಮತ್ತೊಬ್ಬ ಹಿರಿಯ ಪ್ರತಿನಿಧಿ ಜಿಎಸ್‌ಎಂ ಪ್ರಸಾದ್ ಮಾತನಾಡಿ, ಕಳೆದ 45 ವರ್ಷಗಳಿಂದ ಏಜೆಂಟರಾಗಿ ಕೆಲಸ ಮಾಡುತ್ತಿದ್ದೇನೆ. 100 ವರ್ಷ ತುಂಬಿದ ಕಚೇರಿಯಲ್ಲಿ 120 ಕೋಟಿ ರೂ. ವ್ಯವಹಾರವನ್ನು ಮಾಡಿದ್ದೇನೆ. ಈ ಕೆಲಸ ನನಗೆ ಗೌರವದ ಜತೆ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಈ ವೇಳೆ ನಿವೃತ್ತ ಪೋಸ್ಟ್ ಮಾಸ್ಟರ್ ಪುಟ್ಟರಾಜು, ಉಪ ಅಂಚೆ ಪಾಲಕಿ ದೀಪಾ, ಪ್ರತಿನಿಧಿಗಳಾದ ಸಾಹುಕಯ್ಯ, ಅನೋಕ್‌ಕುಮಾರ್ ಮಾತನಾಡಿದರು. ಅಂಚೆ ಕಚೇರಿ ನೌಕರರಾದ ನಿತ್ಯನಾಂದ, ಅಂಚೆ ಕಚೇರಿಯ ರಿಕ್ರಿಯೇಶನ್ ಕ್ಲಬ್ ಕಾರ್ಯದರ್ಶಿ ವೆಂಕಟರಾಮು ಹಾಗೂ ಏಜೆಂಟರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net