ಗ್ರಾಮದ ಅಂಕಪ್ಪ ಎಂಬುವರು ಎಂದಿನಂತೆ ಹೋರಿಯನ್ನು ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಸಮೀಪದ ಅರಣ್ಯ ಪ್ರದೇಶದಿಂದ ಬಂದ ಚಿರತೆ ಹೋರಿಯನ್ನು ಸಾಯಿಸಿ ಅರಣ್ಯ ಪ್ರದೇಶದತ್ತ ಎಳೆದೊಯ್ದು ಬಿಟ್ಟಿದೆ. ಅಂಕಪ್ಪ ಶುಕ್ರವಾರ ಹುಡುಕಾಟ ನಡೆಸಿದಾಗ ಹೋರಿ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ಹಾಗೂ ವಿವೇಕ್ ಪರಿಶೀಲಿಸಿದರು. ಈ ವೇಳೆ ಮೃತಪಟ್ಟ ಹೋರಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಹಾಗೂ ಆಗಾಗ್ಗೆ ಉಪಟಳ ನೀಡುತ್ತಿರುವ ಚಿರತೆಗೆ ಕಡಿವಾಣ ಹಾಕುವಂತೆ ಅಂಕಪ್ಪ ಒತ್ತಾಯಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಿಬ್ಬಂದಿ ಭರವಸೆ ನೀಡಿದರು.