26ರಂದು ಮುಳ್ಳೂರಲ್ಲಿ ಅಂಬೇಡ್ಕರ್ ಜಯಂತಿ

ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಪಿ.ಎಂ. ಸಿದ್ದರಾಜು
ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಪಿ.ಎಂ. ಸಿದ್ದರಾಜು
Published on

ಪ್ರಮುಖ ಮುಖ್ಯಾಂಶಗಳು

  • ಮುಳ್ಳೂರು ಗ್ರಾಮ
  • ನಿವೃತ್ತ ಉಪ ಪೊಲೀಸ್ ಅಧೀಕ್ಷಕ ಪಿ.ಎಂ.ಸಿದ್ದರಾಜು
ಕೊಳ್ಳೇಗಾಲ: ಮುಳ್ಳೂರು ಗ್ರಾಮದಲ್ಲಿ ಏ.26ರಂದು ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ನಿವೃತ್ತ ಉಪ ಪೊಲೀಸ್ ಅಧೀಕ್ಷಕ ಪಿ.ಎಂ.ಸಿದ್ದರಾಜು ಹೇಳಿದರು.
ಗ್ರಾಮದ ಯಜಮಾನರು, ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು, ರಾಜಕೀಯ ನಾಯಕರು ಸೇರಿ ಅಂಬೇಡ್ಕರ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಮಧ್ಯಾಹ್ನ 2 ಗಂಟೆಗೆ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಮುಂಭಾಗದಿಂದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಗೆ ಚಾಲನೆ ದೊರೆಯಲಿದೆ. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಸಂಜೆ 5 ಗಂಟೆಗೆ ಅಂಬೇಡ್ಕರ್ ಸಮುದಾಯ ಭವನ ಬಳಿ ನಡೆಯುವ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ನಳಂದ ಬುದ್ಧ ವಿಹಾರದ ಬಂತೆ ಭೋಧಿರತ್ನ, ಮೈಸೂರು ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಚಾಮರಾಜನಗರ ಸಂಸದ ಸುನೀಲ್ ಬೋಸ್ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಮೈಸೂರು ಮಹಾರಾಜ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಬಿಪಿನ್ ನಾಗರಾಜು ಮುಖ್ಯ ಭಾಷಣ ಮಾಡಲಿದ್ದು, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಪದಕ ಪುರಸ್ಕೃತ ಬೆಂಗಳೂರು ಸಿಸಿಬಿ ಎಸಿಪಿ ಎಚ್.ಕೆ ಮಹಾನಂದ ಅವರನ್ನು ಸನ್ಮಾನಿಸಲಾಗುವುದು. ಅಂತೆಯೆ ಸೋದರ ಸಮಾಜದ ಯಜಮಾನರು ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ನಮ್ಮೂರಿನ ವಿದ್ಯಾರ್ಥಿಗಳನ್ನೂ ಗೌರವಿಸಲಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಕಮಲ್ ನಾಗರಾಜು ಮಾತನಾಡಿ, ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವರ ಮೇಲೆ ಪೊಲೀಸರು ಕೇಸ್ ದಾಖಲಿಸುತ್ತಿದ್ದಾರೆ. ಆದರೆ, ಮಾರಾಟ ಮಾಡುವ ವ್ಯಕ್ತಿಗೆ ಸಫ್ಲೈ ಮಾಡುವ ಮದ್ಯದಂಗಡಿಗಳ ಮೇಲೆ ಪರಿಣಾಮಕಾರಿಯಾಗಿ ಕ್ರಮ ಆಗುತ್ತಿಲ್ಲ. ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುವ ಮದ್ಯದಂಗಡಿಗಳ ಮೇಲೆ ಕೇಸ್ ದಾಖಲಿಸಿ ಪರವಾನಿಗೆ ರದ್ದುಪಡಿಸಬೇಕು. ಪೊಲೀಸರ ವೈಫಲ್ಯದಿಂದ ಮದ್ಯ ಅಕ್ರಮ ಮಾರಾಟ ಹೆಚ್ಚಾಗುತ್ತಿದೆ. ಪೊಲೀಸರೆ ಇದಕ್ಕೆ ನೇರ ಕಾರಣ ಎಂದು ಅಕ್ರೋಶ ಹೊರ ಹಾಕಿದರು.
ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರು ಸಿಕ್ಕಿ ಬಿದ್ದಾಗ ಹಣ ಸುಲಿಗೆ ಮಾಡಲಾಗುತ್ತಿದೆ. ಪೊಲೀಸರಿಗೆ ಮದ್ಯ ಅಕ್ರಮ ಮಾರಾಟ ಜೀವಂತವಾಗಿರಬೇಕೆಂದು ಎಂದು ಗಂಭೀರ ಆರೋಪ ಮಾಡಿದರು.
ಭಾರತದ ಪುರಾತತ್ವ ಇಲಾಖೆ ನಿವೃತ್ತ ಎಸ್.ಸಿದ್ದರಾಜು, ಮುಳ್ಳೂರು ಗ್ರಾಮದ ದೊಡ್ಡ ಯಜಮಾನ ದೊರೆರಾಜು, ಬಸವಣ್ಣ, ಯಜಮಾನರಾದ ಬಸವಣ್ಣ, ಚಂದ್ರಬಾಬು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net