ಕಾರ್ಯಕ್ರಮದಲ್ಲಿ ಕರಕುಶಲ ಕಲೆಗಳಲ್ಲಿ ಸಾಧನೆಗೈದ ಸಮುದಾಯದ 10 ಮಂದಿಯನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ರಾಜು, ವಿಶ್ವಕರ್ಮ ಸಮುದಾಯದ ಜಿಲ್ಲಾಧ್ಯಕ್ಷ ಹೊನ್ನಳ್ಳಿ ಮಹೇಶ್, ಪ್ರಧಾನ ಕಾರ್ಯದರ್ಶಿ ಹರದನನಹಳ್ಳಿ ಸುರೇಶ್, ಗೌರವಾಧ್ಯಕ್ಷ ಸೋಮಾಚಾರಿ, ವಿಶ್ವಕರ್ಮ ನಿಗಮ ಮಂಡಳಿಯ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಆಚಾರ್, ಕನ್ನಡ ಜಾಗೃತಿ ಸಮಿತಿಯ ಸದಸ್ಯೆ ಪದ್ಮಾ ಪುರುಷೋತ್ತಮ್, ಮುಖಂಡರಾದ ಲಿಂಗಣ್ಣಚಾರಿ, ಶ್ರೀನಿವಾಸಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.