ಹನೂರಿನಲ್ಲಿ ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ರೇವಣ್ಣ, ವಿಜಯಕುಮಾರ್, ಮಂಜೇಶ್, ಮುಮ್ತಾಜ್‌ಬಾನು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಎಂ.ಆರ್. ಮಂಜುನಾಥ್ ಭರವಸೆ
ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಹನೂರು: ಮಡಿವಾಳ ಸಮುದಾಯದ ಜನರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ಪಟ್ಟಣದ ತಟ್ಟೆಹಳ್ಳ ಸಮೀಪದ ಬ್ರಾಹ್ಮಣರ ಬೀದಿಯಲ್ಲಿ ಭಾನುವಾರ 16 ಲಕ್ಷ ರೂ. ವೆಚ್ಚದಲ್ಲಿನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ಮಡಿವಾಳ ಸಮುದಾಯಕ್ಕೆ ಭವನ ಇರಲಿಲ್ಲ. ಇದರಿಂದ ಸಮುದಾಯದ ಜನರು ಸಭೆ, ಕಾರ್ಯಕ್ರಮಗಳನ್ನು ಆಯೋಜಿಸಬೇಕಾದರೆ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡ ಹಿರಿಯ ಮುಖಂಡರು ಹಲವು ವರ್ಷಗಳ ಹಿಂದೆಯೇ ವೈಯಕ್ತಿಯವಾಗಿ ಹಣವನ್ನು ಕ್ರೋಡೀಕರಿಸಿ ನಿವೇಶನವನ್ನು ಖರೀದಿಸಿದ್ದರು. ಆದರೆ ಈವರೆಗೂ ಅನುದಾನ ಸಿಗದ ಪರಿಣಾಮ ಭವನ ನಿರ್ಮಾಣ ಸಾಧ್ಯವಾಗಿರಲಿಲ್ಲ. ಭವನ ನಿರ್ಮಿಸಬೇಕು ಎನ್ನುವುದು ಸಮುದಾಯದ ಜನರ ಹಲವು ವರ್ಷಗಳ ಕನಸು. ಈ ಬಗ್ಗೆ ಮನವಿ ಮಾಡಿದ್ದರು. ಇದನ್ನು ಮನಗಂಡು ಶಾಸಕರ ಅನುದಾನದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಅಗತ್ಯವಿರುವ ಇನ್ನುಳಿದ ಅನುದಾನವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಆದರೂ ಸಮುದಾಯದ ಮುಖಂಡರು ಭವನ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.
12 ವರ್ಷದ ಹೋರಾಟದ ಫಲ: ಮಡಿವಾಳ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಶಾಸಕ ಎಂ.ಆರ್. ಮಂಜುನಾಥ್ ಅವರು ಹಿಂದುಳಿದ ವರ್ಗಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಶೋಷಿತ ವರ್ಗದ ಆಶಾಕಿರಣವಾಗಿದ್ದಾರೆ. ಕಳೆದ 12 ವರ್ಷಗಳ ಹೋರಾಟದ ಫಲ ಸಮುದಾಯ ಭವನ ನಿರ್ಮಾಣಕ್ಕೆ ಇದೀಗ ಜಯ ದೊರಕಿದೆ. ಮಡಿವಾಳ ಮಾಚಿದೇವರ ಜಯಂತಿಯಂದೇ ಭೂಮಿಪೂಜೆ ನೆರವೇರಿಸಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ತಿಳಿಸಿದರು.
ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರೇವಣ್ಣ, ಪಿಎಸಿಸಿ ನಿರ್ದೇಶಕ ಮಂಜೇಶ್, ಪಪಂ ಮಾಜಿ ಅಧ್ಯಕ್ಷೆ ಮುಮ್ತಾಜ್‌ಬಾನು, ಮಾಜಿ ಸದಸ್ಯ ಸಿದ್ದರಾಜು, ನಿರ್ಮಿತಿ ಕೇಂದ್ರದ ಎಇಇ ರವಿಕುಮಾರ್, ಮುಖಂಡರಾದ ರುದ್ರಣ್ಣ, ಮೋಹನ್, ರಮೇಶ್, ರವೀಂದ್ರ, ನಿಂಗರಾಜು, ರಾಜುಗೌಡ, ರವಿ, ಮಾದೇವ, ನಾಗರಾಜು ಇನ್ನಿತರರು ಇದ್ದರು.