ಮ.ಬೆಟ್ಟ ಪೊಲೀಸ್ ಠಾಣೆಯ ಮುಖ್ಯ ಪೇದೆಗಳಾದ ರಾಮದಾಸ್, ಮಹೇಶ್, ಉಪ ವಲಯ ಅರಣ್ಯಾಧಿಕಾರಿ ರಮೇಶ್ ಹಾಗೂ ಗಾರ್ಡ್ ಮಾದೇಶ್ ಕರ್ತವ್ಯದಲ್ಲಿದ್ದರು. ರಾತ್ರಿ 10.45ರ ಸುಮಾರಿಗೆ ಸಮೀಪದ ಅರಣ್ಯ ಪ್ರದೇಶದಿಂದ ದಿಢೀರ್ ಚೆಕ್‌ಪೋಸ್ಟ್ ವಸತಿ ಗೃಹದ ಬಳಿ ಒಂಟಿಸಲಗ ಲಗ್ಗೆ ಇಟ್ಟಿದೆ. ಇದರಿಂದ ವಿಚಲಿತರಾದ ಸಿಬ್ಬಂದಿ ಕೆಲಕಾಲ ಆತಂಕಕ್ಕೆ ಒಳಗಾದರು. ಒಂಟಿಸಲಗವನ್ನು ಕಂಡ 2 ಬದಿಯ ಸವಾರರು ಭಯಭೀತರಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು.