ತಿಮ್ಮರಾಜೀಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ಹೊನ್ನಳ್ಳಿ ಮಾರಮ್ಮ ಮತ್ತು ಕುರುಬನ ಕಟ್ಟೆ ಕಂಡಾಯಗಳ ಕೊಂಡೋತ್ಸವ ಅದ್ದೂರಿಯಾಗಿ ನೆರವೇರಿತು.
Published on:
Copied
Follow Us
ಕೊಳ್ಳೇಗಾಲ:ತಾಲೂಕಿನ ತಿಮ್ಮರಾಜೀಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ಹೊನ್ನಳ್ಳಿ ಮಾರಮ್ಮ ಮತ್ತು ಕುರುಬನ ಕಟ್ಟೆ ಕಂಡಾಯಗಳ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಶ್ರೀ ಮಂಟೇಸ್ವಾಮಿ ಗದ್ದಿಗೆ ದೇವಾಲಯ ಮುಂಭಾಗ ಸಿದ್ಧಪಡಿಸಿದ್ದ ಕೊಂಡಕ್ಕೆ ಗುರುವಾರ ರಾತ್ರಿ ಶ್ರೀ ಕುರುಬನಕಟ್ಟೆ ಕ್ಷೇತ್ರದ ಧರ್ಮಾಕಾರಿ ವರುಣ ಲಿಂಗರಾಜೇ ಅರಸ್ ಮುಂಗಡ ಪೂಜೆ ಸಲ್ಲಿಸಿದರು. ಬಳಿಕ ಪಂಪನ ಲಿಂಗಯ್ಯ ಅವರು ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಮಾರನೇ ದಿನ ಬೆಳಗ್ಗೆ ಕುರ್ಜುನ ಬಾವಿ ಬಳಿ ಕಂಡಾಯಗಳು, ಸತ್ತಿಗೆಗೆ ಹೂ-ಹೊಂಬಾಳೆ ಧರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಕಂಡಾಯಗಳು ಮತ್ತು ದಳಗಳನ್ನು ದೊಡ್ಡಪ್ಪ, ಶೇಖರ್, ರೇಚಣ್ಣ, ಶೇಖರ್ ಹಾಗು ಮಾರಮ್ಮನ ಸತ್ತಿಗೆಯನ್ನು ಜಯಪ್ಪ ಹೊತ್ತು ಮಂಗಳವಾದ್ಯ, ತಮಟೆ ಇಮ್ಮೇಳದಲ್ಲಿ ಮೆರವಣಿಗೆ ಮೂಲಕ ಆಗಮಿಸಿ ಕೊಂಡ ಹಾಯ್ದರು. ನೆರೆದಿದ್ದ ಭಕ್ತರು ಹಷೋದ್ಗಾರ ಮೊಳಗಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಕೊಂಡವನ್ನು ಕಣ್ತುಂಬಿಕೊಂಡರು.
ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಪುಟ್ಟಣ್ಣ, ಗೌಡ್ರು ಮಹದೇವಪ್ಪ, ತಿಮ್ಮರಾಜೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಾಜು ತಿಮ್ಮರಾಜೀಪುರ, ಮಾಜಿ ಉಪಾಧ್ಯಕ್ಷ ಕೆಂಪರಾಜು, ಮಾಜಿ ಸದಸ್ಯ ಕುಮಾರ್, ರಾಚಪ್ಪ, ಶಾಂತರಾಜು,ಆರ್.ಎಂ.ಸಿದ್ದಯ್ಯ, ರಂಗಸ್ವಾಮಿ, ನಿಂಗಯ್ಯ, ಗುರುಸ್ವಾಮಿ, ರಾಚಪ್ಪ ಇತರರಿದ್ದರು.