ಜೂಜಾಡುತ್ತಿದ್ದ 17 ಜನರ ಬಂಧನ

17 ಜೂಜುಕೋರರ ಬಂಧನ
17 ಜೂಜುಕೋರರ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ವಡಗೆರೆ ಗ್ರಾಮದಲ್ಲಿ ಅಡ್ಡೆ ಮೇಲೆ ಪೊಲೀಸರ ದಾಳಿ
ಯಳಂದೂರು: ತಾಲೂಕಿನ ವಡಗೆರೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಗುಡ್ಡದ ಬಳಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿ 17 ಜೂಜುಕೋರರನ್ನು ಬಂಧಿಸಿ, 65,650 ರೂ.ನಗದು, 8 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಎಸ್.ಕೆ. ಆಕಾಶ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಉಮ್ಮತ್ತೂರು ಗ್ರಾಮದ ಸೋಮಣ್ಣ, ಯಳಂದೂರು ಪಟ್ಟಣದ ಶ್ರೀನಿವಾಸ, ಕೃಷ್ಣ, ಜಗದೀಶ, ಶ್ರೀನಿವಾಸನಾಯಕ, ಸುನೀಲ್, ಶಶಿಕುಮಾರ್, ಮಂಜುನಾಥ, ಚಂದ್ರಶೇಖರ್, ನಂಜುಂಡಸ್ವಾಮಿ, ಮಹೇಶ, ರಮೇಶ, ಲೋಕೇಶ, ಇರಸವಾಡ ಗ್ರಾಮದ ಅಕ್ಬರ್, ವಾಸು, ಅಂಬಳೆ ಗ್ರಾಮದ ಪ್ರಕಾಶ, ಆಲ್ಕೆರೆ ಅಗ್ರಹಾರದ ಮಂಜು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net