ಯುವ ಬ್ರಿಗೇಡ್‌ನಿಂದ ಕಣದಲ್ಲೂ ಶಿವ

27MAHESH2
Published on

ಚಾಮರಾಜನಗರ: ಜಿಲ್ಲಾ ಯುವ ಬ್ರಿಗೇಡ್ ವತಿಯಿಂದ ಇತ್ತೀಚೆಗೆ ‘ಕಣದಲ್ಲೂ ಶಿವ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ರಸ್ತೆ ಬದಿಯಲ್ಲಿ ಹಾಗೂ ಮರಗಳ ಬುಡಗಳಲ್ಲಿ ಅಗೌರವವಾಗಿ ಇಟ್ಟಿದ್ದ ದೇವರ ೆಟೋಗಳನ್ನು ಒಂದೆಡೆ ಕಲೆ ಹಾಕಿ ಗಾಜು ಮತ್ತು ಇತರ ಭಾಗಗಳನ್ನು ಬೇರ್ಪಡಿಸಿ ದೇವರ ಪಟವನ್ನು ಮಣ್ಣಿನಲ್ಲಿ ಮುಚ್ಚಿ ಗಿಡ ನೆಡುವ ಮೂಲಕ ಪರಿಸರ ಕಾಳಜಿಗೆ ಒತ್ತು ನೀಡಲಾಯಿತು.

ಚಾಮರಾಜೇಶ್ವರ ದೇವಾಲಯದ ಸುತ್ತಮುತ್ತ, ಮಾರಿಗುಡಿ, ಸಂತೇಮರಹಳ್ಳಿ ಸರ್ಕಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಸಾರ್ವಜನಿಕರು ಮರಗಳ ಬುಡಗಳಲ್ಲಿ ಇಟ್ಟಿದ್ದ ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಸಂಗ್ರಹಿಸಲಾಯಿತು. ನಗರದ ದೊಡ್ಡ ಕಲ್ಯಾಣಿ ಹತ್ತಿರ ದೇವರ ಪಟಗಳನ್ನು ಹೂತು ಹಾಕಲಾಯಿತು. ಬೇರ್ಪಡಿಸಿದ ತ್ಯಾಜ್ಯವನ್ನು ನಗರಸಭೆಗೆ ವಿಲೇವಾರಿ ಮಾಡಲಾಯಿತು. ದಕ್ಷಿಣ ರಾಜ್ಯ ಸಂಚಾಲಕ ಚಂದ್ರಶೇಖರ್ ಹಾಗೂ 30ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net