ಪಾರ್ಕಿಂಗ್ ಸ್ಥಳದಲ್ಲಿ ಹೊತ್ತಿ ಉರಿದ ಕಾರು

12 yelandur 04
Published on

ಚಾಮರಾಜನಗರ: ಪಟ್ಟಣದ ಮಿನಿ ವಿಧಾನಸೌಧದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಮಂಗಳವಾರ ಕಾರೊಂದು ಹೊತ್ತಿ ಉರಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಿನಿ ವಿಧಾನಸೌಧದ ತಾಪಂ ಸಭಾಂಗದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಅವರು ಅಧಿಕಾರಿಗಳ ಸಭೆ ಕರೆದಿದ್ದರು. ತಾಲೂಕು ಪಂಚಾಯಿತಿ ನರೇಗಾ ವಿಭಾಗದ ಜೆಇ ಆದರ್ಶ್ ತಮ್ಮ ಇಂಡಿಕಾ ಕಾರು ನಿಲ್ಲಿಸಿ ಸಭೆಗೆ ತೆರಳಿದ್ದರು. ಬಳಿಕ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಅಲ್ಲೇ ಇದ್ದ ಕೆಲ ವಾಹನ ಚಾಲಕರು ಇದನ್ನು ಆರಿಸಲು ಪ್ರಯತ್ನಿಸಿದ್ದಾರೆ. ವಿಷಯವನ್ನು ಆದರ್ಶ್ ಅವರಿಗೆ ಮುಟ್ಟಿಸಿದ್ದಾರೆ. ತಕ್ಷಣ ಆದರ್ಶ್ ಬಂದು ಬಾನೆಟ್ ತೆರೆಯಲು ಪ್ರಯತ್ನಿಸಿದರೂ ಓಪನ್ ಆಗಿಲ್ಲ. ಕೂಡಲೇ ಆರೆಯಿಂದ ಬಾನೆಟ್ ತೆರೆದು, ಪಕ್ಕದ ಮನೆಯಲ್ಲಿದ್ದ ನೀರಿನ ಪೈಪ್‌ನಿಂದ ಬೆಂಕಿ ನಂದಿಸಲಾಗಿದೆ. ಅಷ್ಟರಲ್ಲಿ ಕಾರು ಬಹುತೇಕ ಸುಟ್ಟು ಹೋಗಿತ್ತು. ಕಾರಿನಲ್ಲಿ ಇಟ್ಟಿದ್ದ ಫೈಲ್‌ಗಳು ಸೇರಿದಂತೆ ಇತರ ಕೆಲ ವಸ್ತುಗಳು ಸುರಕ್ಷಿತವಾಗಿದ್ದವು. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net