

ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು. ನಗರದ ರೋಟರಿ ಭವನದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ನಮ್ಮ ರೋಟರಿ ನಮ್ಮ ಆರೋಗ್ಯ ಸಿರಿ ಎಂಬ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರೋಟರಿ ಸಂಸ್ಥೆ, ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್, ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ 200 ಜನರಿಗೆ ತಪಾಸಣೆ ಮಾಡಿಸಿಕೊಂಡರು. 100 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಇವರನ್ನು ಕೊಯಂಬತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
ರೋಟರಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಮಾತನಾಡಿ, ಕಣ್ಣಿನ ದೃಷ್ಠಿ ಎಲ್ಲರಿಗೂ ಮಹತ್ವದ್ದು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ವಯೋವೃದ್ದರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿದ್ದು ದಿನನಿತ್ಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚತ ನೇತ್ರಾ ತಪಾಸಣಾ ಶಿಬಿರವನ್ನು ಅಯೋಜಿಸಿದ್ದು, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಶಿಬಿರದಲ್ಲಿ ಹೆಚ್ಚಿನ ಜನರು ತಪಾಸಣೆಗೆ ಬಂದಿದ್ದಾರೆ ಅದರಲ್ಲೂ ಪಿರಿಯಾಪಟ್ಟಣ, ಮೈಸೂರು, ಗುಂಡ್ಲುಪೇಟೆ, ಜಿಲ್ಲೆಯಿಂದಲ್ಲೂ, ಬಂದಿದ್ದು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ರೋಟರಿ ಸಂಸ್ಥೆಯ ಶಿಬಿರ ಸದುಪಯೋಗವನ್ನು ಪಡೆದುಕೊಂಡಿರುವುದು ತುಂಬಾ ಸಂತಸವಾಗಿದೆ ಎಂದರು. ರೋಟರಿ ಸಂಸ್ಥೆಯ ಸದಸ್ಯ ರಾಮು ಮಾತನಾಡಿ, ಶಿಬಿರದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಕೊಯಂಬತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ತೆರಳುತ್ತಿರುವವರಿಗೆ 100 ಜನರಿಗೂ ಊಟದ ವ್ಯವಸ್ಥೆ ಮಾಡಿಸಿದರು. ರೋಟರಿ ಸಂಸ್ಥೆ ಸಂಸ್ಥಾಪಕ ಸದಸ್ಯ ಸಿ.ವಿ.ಶ್ರೀನಿವಾಸಶೆಟ್ಟಿ, ಜಿ.ಆರ್.ಅಶ್ವಥ್ ನಾರಾಯಣ್, ಕಾರ್ಯದರ್ಶಿ ಕಾಗಲವಾಡಿಚಂದ್ರು, ಯೋಗರಾಜು, ಉಪಾಧ್ಯಕ್ಷ ಎಲ್.ನಾಗರಾಜು, ಮುಂದಿನ ಸಾಲಿನ ಅಧ್ಯಕ್ಷ ಚಂದ್ರಪ್ರಭಜೈನ್, ಉಚಿತ ಕಣ್ಣಿನ ಶಿಬಿರದ ಮೇಲ್ವಿಚಾರಕ ವಿಜಯಕಾಂತ್, ಡಾ. ಪರಮೇಶ್ವರಪ್ಪ ಇತರರು ಹಾಜರಿದ್ದರು…