ಚಾಮರಾಜನಗರದಲ್ಲಿ ಮಾಸ್ಕ್ ದಿನ ಆಚರಣೆ

18CHN7
Published on

ಚಾಮರಾಜನಗರ: ಕೋವಿಡ್-19 ತಡೆಗಾಗಿ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲಾಡಳಿತದಿಂದ ಗುರುವಾರ ನಗರದಲ್ಲಿ ಆಚರಿಸಿದ ಮಾಸ್ಕ್ ದಿನ ಗಮನ ಸೆಳೆಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಮಾಸ್ಕ್ ದಿನ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಪಾದಯಾತ್ರೆಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಚಾಲನೆ ನೀಡಿದರು.
ಕೋವಿಡ್-19ರ ಮುಂಜಾಗ್ರತಾ ಕ್ರಮಗಳ ಪಾಲನೆ ಕುರಿತು ಭಿತ್ತಿಪತ್ರ ಹಿಡಿದು ಅಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಜಿಪಂ ಸಿಇಒ ಬಿ.ಎಚ್.ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎಚ್.ಡಿ. ಆನಂದಕುಮಾರ್ ಸೇರಿದಂತೆ ಹಿರಿಯ ಅಕಾಧಿರಿಗಳು ಕಾಲ್ನಡಿಗೆಯಲ್ಲಿ ನಗರದ ಮುಖ್ಯರಸ್ತೆ ಮೂಲಕ ಹಾದು ಜಿಲ್ಲಾಡಳಿತ ಭವನ ತಲುಪಿದರು.
ಕೋವಿಡ್ ನಿಯಂತ್ರಣಕ್ಕಾಗಿ ರಾಷ್ಟ್ರೀಯ ನಿರ್ದೇಶನಗಳ ಪಾಲನೆಯನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಜನರು ಮುಖಗವಸು ಧರಿಸುವುದು, ಆಗಿಂದಾಗ್ಗೆ ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ವೈದ್ಯಕಿಯೇತರ ಪಾಲನೆಯಾಗಿದೆ. ಈ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣನವರ್, ಡಿಎಚ್‌ಒ ಡಾ.ಎಂ.ಸಿ ರವಿ, ತಹಸೀಲ್ದಾರ್ ಜೆ. ಮಹೇಶ್, ಇತರೆ ಇಲಾಖೆಗಳ ಅಕಾಧಿರಿ, ಸಿಬ್ಬಂದಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net