ದಿಂಬಂ ರಸ್ತೆಯಲ್ಲಿ ಹೊತ್ತಿ ಉರಿದ ಕಾರು..

01 charan 11
Published on

ಚಾಮರಾಜನಗರ: ಈರೋಡ್ ಜಿಲ್ಲೆಯ ದಿಂಬಂ ಘಾಟ್ ನಲ್ಲಿ ಹೋಗುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಮೈಸೂರಿನಿಂದ ಈರೋಡ್ ಕಡೆಗೆ ಹೋಗುತ್ತಿದ್ದ ಮಹಮದ್ ಎಂಬುವವರ ಕಾರು ಬೆಟ್ಟದ 27ನೇ ತಿರುವಿನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರಿ‌ನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಆಸನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು‌. ಅಗ್ನಿಶಾಮಕ‌ದಳ ಸಿಬ್ಬಂದಿ ಬೆಂಕಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net