

ಚಾಮರಾಜನಗರ: ಬಯಲುಮುಕ್ತ ಬಹಿರ್ದೆಸೆ ಕನಸು ಇಂದಿಗೂ ನನಸಾಗಿಲ್ಲ. ಕೇಂದ್ರ ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಗ್ರಾಮೀಣ ಭಾಗದಲ್ಲಿ ರಸ್ತೆ, ಜಮೀನುಗಳನ್ನು ಬಹಿರ್ದೆಸೆಗೆ ಅವಲಂಬಿಸಿದ್ದಾರೆ ಎಂದು ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ರಂಗಸ್ವಾಮಿ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಗ್ರಾಪಂ ಮಟ್ಟದಲ್ಲಿ ಇದರ ತಡೆಗೆ ವ್ಯಾಪಕ ಪ್ರಚಾರ ಆಗಬೇಕಿದೆ. ಇನ್ನು ಕುಣಗಳ್ಳಿ ಗ್ರಾಪಂ ವತಿಯಿಂದ ನಿರ್ಮಾಣ ಮಾಡಿಕೊಟ್ಟಿರುವ ಶೌಚಗೃಹ ಹಣ ಹಲವರಿಗೆ ಬಿಡುಗಡೆಯಾಗಿಲ್ಲ. ಇಷ್ಟೆಲ್ಲ ಸಮಸ್ಯೆ ಇರುವಾಗ ಒಂದು ಯೋಜನೆ ಹೇಗೆ ತಾನೇ ಸಮರ್ಪಕವಾಗಿ ಅನುಷ್ಠಾನವಾಗುತ್ತದೆ. ಬಯಲು ಬಹಿರ್ದೆಸೆಮುಕ್ತ ಜಿಲ್ಲೆಯಾಗಿಲ್ಲ. ಗ್ರಾಪಂ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ತಿಳಿಸಿದ್ದಾರೆ.