ನಿಸರ್ಗ ಕಾಲೇಜು ಆಫ್ ಮ್ಯಾನೇಜ್‌ಮೆಂಟ್‌ಗೆ ಉತ್ತಮ ಫಲಿತಾಂಶ

Published on

ಕೊಳ್ಳೇಗಾಲ: ಪಟ್ಟಣದ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್ಮೆಂಟ್‌ನ ವಿದ್ಯಾರ್ಥಿಗಳು ಡಿಸೆಂಬರ್ ತಿಂಗಳಲ್ಲಿ ನಡೆದ 5ನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಕಾಲೇಜಿಗೆ ನೀಡಿದ್ದಾರೆ.

ಅಂತಿಮ ಬಿಬಿಎ ಪದವಿ ವಿಭಾಗದಲ್ಲಿ 6 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಇದ್ದರಿಂದ ಶೇ. 100ರಷ್ಟು ಫಲಿತಾಂಶ ದೊರೆತಿದೆ. ಇವರಲ್ಲಿ ಎನ್.ಸಹನಾ 700ಕ್ಕೆ 611 (ಶೇ.87) ಅಂಕಗಳಿಸಿ ಪ್ರಥಮ ಸ್ಥಾನದಲ್ಲಿದ್ದು, ಪಿ.ಪೂರ್ಣಿಮಾ 608 (ಶೇ.86.85) ಅಂಕ ಪಡೆದು ದ್ವಿತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ, ಮೆನನ್ ಎಕ್ಸೇವೀಯರ್ 573 (ಶೇ.81.85) ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

ಬಿಕಾಂ ಪದವಿ ವಿಭಾಗದಲ್ಲಿ 122ರ ಪೈಕಿ 111 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.91ರಷ್ಟು ಫಲಿತಾಂಶ ಪಡೆದಿದ್ದಾರೆ. ಎಸ್.ಮಾನಸಾ 670 (ಶೇ.95.71) ಅಂಕಗಳಿಸಿ ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಎಸ್. ಪೂರ್ವಿಕಾ 665 (ಶೇ.95) ಅಂಕ ಪಡೆದು ಎರಡು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಎಸ್.ಬಿ. ಲಿಖಿತಾ 665 (ಶೇ.95), ಪಿ.ಅಪೂರ್ವ 662 (ಶೇ.94.57) ಅಂಕ ಪಡೆದಿದ್ದಾರೆ.

ಬಿಎ ಪದವಿ ವಿಭಾಗದಲ್ಲಿ ಶೇ.97ರಷ್ಟು ಫಲಿತಾಂಶ ಲಭಿಸಿದೆ. ಎಸ್.ಜೀವಿತಾ 626 (ಶೇ.89.42), ಎಂ. ಸತೀಶ್ 622 (ಶೇ.88.85), ಜೆ. ವರಲಕ್ಷ್ಮೀ 618 (ಶೇ.88.28) ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಬಿಎಸ್ಸಿ ಪದವಿ ವಿಭಾಗದಲ್ಲಿ ಶೇ.86 ರಷ್ಟು ಫಲಿತಾಂಶ ಬಂದಿದ್ದು, ಪಿ. ಯಶಸ್ವಿನಿ 686(ಶೇ.98), ಅನುಶ್ರೀ 675 (ಶೇ.96.42), ತೆನ್ನಿಯತ್ 673(ಶೇ.96.14) ಅಂಕ ಪಡೆದಿದ್ದಾರೆ. ಉತ್ತಮ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್ ದತ್ತೇಶ್ ಕುಮಾರ್. ಪ್ರಾಂಶುಪಾಲ ಡಿ.ಧನಂಜಯ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net