

ಗುಂಡ್ಲುಪೇಟೆ: ಪಟ್ಟಣದ ಶ್ರೀ ವಿನಾಯಕ ಕಾನ್ವೆಂಟ್‌ನಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಕಂಪನಿ ವತಿಯಿಂದ ಬುಧವಾರ ಆರಂಭವಾದ ಮೂರು ದಿನಗಳ ಉಚಿತ ಹೇರ್ ಕಲರಿಂಗ್ ಅಭಿಯಾನದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ತಮ್ಮ ತಲೆಗೂದಲಿಗೆ ಬಣ್ಣ ಹಚ್ಚಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಮಹಿಳಾ ಸಂಘಗಳ ಸಂಜೀವಿನಿ ಘಟಕದ ವಲಯ ಮೇಲ್ವಿಚಾರಕಿ ಪುಟ್ಟಮ್ಮ ತಮ್ಮ ತಲೆಗೂದಲಿಗೆ ಕಲರಿಂಗ್ ಮಾಡಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿನಾಯಕ ವಿದ್ಯಾಸಂಸ್ಥೆಯ ಕೆ.ಎನ್.ಚಂದ್ರಶೇಖರ್, ಆಡಳಿತ ಮಂಡಳಿಯ ಮುಖ್ಯಸ್ಥೆ ಲಕ್ಷ್ಮೀ ಚಂದ್ರಶೇಖರ್, ಪತ್ರಕರ್ತ ಸೋಮಶೇಖರ್, ರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್, ವಿಜಯವಾಣಿ ಏಜೆಂಟರಾದ ಭೈರೇಶ್ ಗಾಣಿಗ್, ಸಿದ್ದಪ್ಪ, ಅನುಗ್ರಹ ಫೌಂಡೇಷನ್ ಸಂಯೋಜಕ ಕೆ.ರಮೇಶ್, ವಿಕಲಚೇತನರ ಸಮುದಾಯ ಕಾರ್ಯಕರ್ತೆಯರಾದ ಪುಟ್ಟತಾಯಮ್ಮ, ಮುದ್ದಮ್ಮ ಇದ್ದರು. ಗುರುವಾರವೂ ಇದೇ ಸ್ಥಳದಲ್ಲಿ ಹೇರ್ ಕಲರಿಂಗ್ ಅಭಿಯಾನ ಮುಂದುವರಿಯಲಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ವಿಜಯವಾಣಿ ಪತ್ರಿಕೆಯು ಹಲವು ಸಾಮಾಜಿಕ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದು, ಈಗ ಪ್ರಸಿದ್ಧ ಗಾರ್ನಿಯರ್ ಕಂಪನಿಯೊಂದಿಗೆ ಉಚಿತ ಹೇರ್ ಕಲರಿಂಗ್ ಅಭಿಯಾನಕ್ಕೆ ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ. ಸಾವಿರಾರು ಮಹಿಳೆಯರು ಹಾಗೂ ಪುರುಷರು ಇದರ ಸದ್ಬಳಕೆ ಮಾಡಿಕೊಳ್ಳಲಿದ್ದಾರೆ.
ಪುಟ್ಟಮ್ಮ, ಸಂಜೀವಿನಿ ಘಟಕದ ವಲಯ ಮೇಲ್ವಿಚಾರಕಿ
ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಕಂಪನಿಯ ಉಚಿತ ಹೇರ್ ಕಲರಿಂಗ್ ಆಭಿಯಾನಕ್ಕೆ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ನಮಗೆ ಹೆಮ್ಮೆ. ತಾಲೂಕಿನ ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು.
ಕೆ.ಎನ್.ಚಂದ್ರಶೇಖರ್, ವಿನಾಯಕ ಕಾನ್ವೆಂಟ್ ಆಡಳಿತಾಧಿಕಾರಿ