ಯಳಂದೂರು : ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರಿಂದ ಸಾಲ ವಸೂಲಿ ಮಾಡಲು ತೆರಳಿದ್ದ ಸಂಸ್ಥೆಯ ಸೇವಾ ಪ್ರತಿನಿಧಿ ಪಲ್ಲವಿ ಎಂಬುವವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದರೆ.
ಮಂಗಳವಾರ ಬೆಳಗ್ಗೆ ಕಂದಹಳ್ಳಿ ಗ್ರಾಮದ ನಾಯಕರ ಬಡಾವಣೆಯಲ್ಲಿ ಮಹಿಳಾ ಸಂಘದಿಂದ ನೀಡಿರುವ ಸಾಲ ಮತ್ತು ಜಮಾ ಮಾಡುವ ಬಗ್ಗೆ ವಿಚಾರಿಸಲು ಪಲ್ಲವಿ ಹೋದಾಗ ಜೋಗನಾಯಕ ಅವರ ಮಗ ರಾಜು ನೀವು ಮಹಿಳೆಯರ ಸಂಘ ಮಾಡಿ, ಸಾಲ ನೀಡಿ ಅವರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡಿ ಕೂಲಿ ಬೆದರಿಕೆ ಹಾಕಿದ ಎನ್ನಲಾಗಿದೆ. ಈ ಬಗ್ಗೆ ಎಂದು ಪಲ್ಲವಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.