ರಂಗಾಸಕ್ತರಿಗೆ ನಾಟಕ ತರಬೇತಿ

Published on

ಚಾಮರಾಜನಗರ: ಅಭ್ಯಾಸಿ ಟ್ರಸ್ಟ್ ವತಿಯಿಂದ 18 ವರ್ಷ ಮೇಲ್ಪಟ್ಟ ರಂಗಾಸಕ್ತರಿಗೆ ನಟ ಮತ್ತು ನಟನೆ-ರಂಗಭೂಮಿ ಪಾಠಗಳು ಎಂಬ ನಾಟಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.


ನಗರದ ಪಚ್ಚಪ್ಪ ಸರ್ಕಲ್ ಹತ್ತಿರ ಇರುವ ಸಿಆರ್‌ಕೆ ಕಾಂಪ್ಲೆಕ್ಸ್‌ನಲ್ಲಿ ಮೇ 26ರ ಭಾನುವಾರ ತರಬೇತಿಗೆ ಆಡಿಷನ್ ನಡೆಯಲಿದೆ. ತರಬೇತಿಯಲ್ಲಿ ನಟನೆಯ ಕುರಿತು ಪಠ್ಯ ಹಾಗೂ ಪ್ರಾಯೋಗಿಕ ತರಗತಿಗಳು ಇರುತ್ತವೆ. ಸಂಗೀತ ಮತ್ತು ಅಭಿನಯ ಪ್ರಧಾನವಾದ ನಾಟಕವನ್ನು ಕಲಿಸಿ ಚಾಮರಾಜನಗರ, ಮೈಸೂರು ಹಾಗೂ ರಾಜ್ಯದ ಹಲವೆಡೆ ಪ್ರದರ್ಶನ ನೀಡಲಾಗುತ್ತದೆ. ತರಬೇತಿ ಪೂರೈಸಿದವರಿಗೆ ಪ್ರಮಾಣ ಪತ್ರ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ, ಹೆಸರು ನೋಂದಾಯಿಸಿಕೊಳ್ಳಲು ಮೊ.7411491077 ಸಂಪರ್ಕಿಸಲು ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಮತ್ತು ರಂಗ ನಿರ್ದೇಶಕ ಕಿರಣ್‌ಗಿರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net