

ಚಾಮರಾಜನಗರ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್. ಮಹೇಶ್ (ವೆಂಕಟಯ್ಯನಛತ್ರ ಗ್ರಾಪಂ ಪ್ರಭಾರ ಪಿಡಿಒ) ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಸ್. ಪೂವಿತಾ ಆದೇಶಿಸಿದ್ದಾರೆ.
ಪಿಡಿಒ ಆರ್. ಮಹೇಶ್ ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ರಾಜಕೀಯ ನಾಯಕರುಗಳಿಗೆ ಸಂಬಂಧಿಸಿದ ಗೋಡೆ ಬರಹ, ಬ್ಯಾನರ್, ಪೋಸ್ಟರ್ ತೆರವುಗೊಳಿಸುವಲ್ಲಿ ಕ್ರಮವಹಿಸದೇ ಇರುವುದು, ನರೇಗಾ ಯೋಜನೆ ಕೆಲಸದಲ್ಲಿ ಅಸಡ್ಡೆ ಹೊಂದಿರುವುದು, ಪೂರ್ವಾನುಮತಿ ಪಡೆಯದೇ ಗೈರು ಹಾಜರಾಗಿರುವುದು, ತೆರಿಗೆ ವಸೂಲಾತಿಯಲ್ಲಿ ಪೂರ್ಣ ಪ್ರಗತಿ ಸಾಧಿಸುವಲ್ಲಿ ವಿಳಂಬವಾಗಿರುವುದು ಸೇರಿದಂತೆ ಇನ್ನೂ ಇತರೆ ಕರ್ತವ್ಯ ಲೋಪದ ಬಗ್ಗೆ ವರದಿ ಸಲ್ಲಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಆರ್. ಮಹೇಶ್ ಅವರನ್ನು ಅಮಾನತು ಮಾಡಿರುವುದಾಗಿ ಜಿಪಂ ಸಿಇಒ ಎಸ್. ಪೂವಿತಾ ಆದೇಶದಲ್ಲಿ ತಿಳಿಸಿದ್ದಾರೆ.