

ಚಾಮರಾಜನಗರ: ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ರೂಪ ಮೋಹನ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಗ್ರಾ.ಪಂ ಅಧ್ಯಕ್ಷರಾಗಿದ್ದ ವಿಶಾಲಾಕ್ಷಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ನಿಗಧಿಯಾಗಿತ್ತು. ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರೂಪ ಮೋಹನ್ ಅವರು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸುರೇಶ್ ಕುಮಾರ್ ಅಧಿಕೃವಾಗಿ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಓ ರಾಮೇಗೌಡ ಇದ್ದರು.
ಈ ವೇಳೆ ನೂತನ ಅಧ್ಯಕ್ಷೆ ರೂಪ ಮೋಹನ್ ಮಾತನಾಡಿ,ಮುಂದಿನ ದಿನಗಳಲ್ಲಿ ಎಲ್ಲರು ಒಟ್ಟಿಗೆ ಗ್ರಾಮದ ಅಭಿವೃದ್ದಿಗೆ ಶ್ರಮಿಸೋಣ. ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಮೊದಲ ಅಧ್ಯತೆಯಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನವೀನ್‌ಕುಮಾರ್ ಸದಸ್ಯರಾದ ನಿರ್ಮಲರಾಮು, ಶಂಕರ್, ವಿಶಾಲಾಕ್ಷಿ, ರಂಗಸ್ವಾಮಿನಾಯಕ , ಮಹದೇವಶೆಟ್ಟಿ, ಶಿವಣ್ಣೇಗೌಡ, ಮಣಿಕಂಠ, ಕವಿತಾ, ಶೈಲಜಾ, ಕವಿತಾ, ಪೂವಮ್ಮ, ಚೈತ್ರ, ಸಿದ್ದರಾಜು, ನಾಗರತ್ನಮ್ಮ, ರಾಜಮ್ಮ, ಪದ್ಮ, ಮುಖಂಡರಾದ ದಿವಾಕರ್, ವೀರಣ್ಣ, ಹೊಂಗನೂರು ಪುಟ್ಟಸ್ವಾಮಿ ಹಾಜರಿದ್ದರು.