ಬೀರೂರಲ್ಲಿ ಸವಾಲಾದ ತ್ಯಾಜ್ಯ ವಿಲೇವಾರಿ

13 BIRUR 01
Published on

ಬೀರೂರು: ದಿನನಿತ್ಯದ ಬಳಕೆ ವಸ್ತುಗಳ ಜತೆಗೆ ಪ್ಲಾಸ್ಟಿಕ್ ಬಳಕೆಯೂ ಹೆಚ್ಚಾಗುತ್ತಿದ್ದುತ್ತಿದೆ. ಇದಕ್ಕೆ ಹೊಸದಾಗಿ ಮದ್ಯದಂಗಡಿಗಳ ತ್ಯಾಜ್ಯವು ಸೇರಿದ್ದು, ತಾಜ್ಯ ನಿರ್ವಹಣೆಗೆ ಪುರಸಭೆ ಹರಸಹಾಸ ಪಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಬೀರೂರಿನ ಲಿಂಗದಹಳ್ಳಿ ರಸ್ತೆ, ಅಜ್ಜಂಪುರ ರಸ್ತೆ, ರೈಲ್ವೇ ಸ್ಟೇಷನ್ ರಸ್ತೆ, ಬಿ.ಹೆಚ್.ರಸ್ತೆ ಸೇರಿ ಒಟ್ಟು 8 ಮದ್ಯದಂಗಡಿಗಳಿದ್ದು, ಅಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಲೋಟ, ಮದ್ಯದ ಖಾಲಿ ಪ್ಯಾಕೆಟ್‌ಗಳು, ನೀರಿನ ಖಾಲಿ ಬಾಟಲಿ ಹಾಗೂ ಗಾಜಿನ ಬಾಟಲಿಗಳ ತ್ಯಾಜ್ಯ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಕಸ ಸಂಗ್ರಹಕ್ಕೆ ಪುರಸಭೆಯಿಂದ 4 ಆಟೋ ಹಾಗೂ 2 ಟ್ರಾೃಕ್ಟರ್‌ಗಳ ವ್ಯವಸ್ಥೆ ಮಡಲಾಗಿದೆ. ಆದರೆ ಕೆಲವು ಮದ್ಯದಂಗಡಿ ಮತ್ತು ಕ್ಯಾಂಟೀನ್‌ಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಲೋಟಗಳು, ಪೌಚ್ ಮೊದಲಾದ ತ್ಯಾಜ್ಯವನ್ನು ರಾತ್ರಿ ವೇಳೆ ಖಾಲಿ ಜಾಗ ಮತ್ತು ರಸ್ತೆ ಬದಿಯಲ್ಲಿ ಸುರಿದು ಕಸದ ವಾಹನ ಬರುವ ಮುನ್ನವೇ ಅದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಕೆಟ್ಟ ವಾಸನೆ ಬೀರುತ್ತಿದೆ. ಇದರಿಂದ ಬೆಳಗ್ಗೆ ವಿಹಾರಕ್ಕೆ ಬರುವ ವೃದ್ದರು, ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಪುರಸಭೆಯಲ್ಲಿ ಲಭ್ಯವಿರುವ ಪೌರ ಕಾರ್ಮಿಕರನ್ನು ಬಳಸಿಕೊಂಡು ಪಟ್ಟಣದ ಸೌಂದರ್ಯ ಕಾಪಾಡಲು ಪುರಸಭೆ ಆಡಳಿತ ಮಂಡಳಿ ಶ್ರಮಿಸುತ್ತಿದ್ದರೆ ಇತ್ತ ತಮ್ಮ ವ್ಯವಹಾರದಲ್ಲಿ ಲಾಭಗಳಿಸುವ ಮದ್ಯದಂಗಡಿ ಮಾಲೀಕರು ಮಾಲಿನ್ಯ ಉಂಟುಮಾಡುವ ಮೂಲಕ ಸ್ವಚ್ಛತೆಗೆ ಕಂಟಕವಾಗಿದ್ದಾರೆ. ಪುರಸಭೆ ಮನೆ ಮತ್ತು ಅಂಗಡಿಗಳ ಬಾಗಿಲಿಗೆ ಕಳುಹಿಸಿದರೂ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದವರ ವಿರುದ್ಧ ಪುರಸಭೆ ದಂಡ ವಿಧಿಸಿ ವ್ಯಾಪಾರ ಪರವಾನಗಿ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಶಿಾರಸ್ಸು ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಬಿ.ವಿ.ಮಹೇಶ್ವರಪ್ಪ ಬಳಗಾರ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net