ನಾಳೆ ಮಹಿಳಾ ಸಾಂಸ್ಕೃತಿಕ ಉತ್ಸವ

NIJALINGAPPA (1)
Published on

ಚಳ್ಳಕೆರೆ: ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಾ.7ರಂದು 2019ರ ಮಹಿಳಾ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ತಿಳಿಸಿದ್ದಾರೆ.

ಉತ್ಸವದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ಕಾನೂನು ಅರಿವು ಕುರಿತು ವಿಚಾರ ಸಂಕಿರಣ. ಮಹಿಳಾ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಸಮಾರಂಭವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸುವರು. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ, ಸಂಸದ ಎ.ನಾರಾಯಣಸ್ವಾಮಿ, ಎಂಎಲ್‌ಸಿ ಜಯಮ್ಮ ಬಾಲರಾಜ್, ಜಿಪಂ ಸದಸ್ಯರಾದ ಬಿ.ಪಿ.ಪ್ರಕಾಶ್‌ಮೂರ್ತಿ, ಎನ್.ಓಬಳೇಶ್, ಟಿ.ಮುತ್ತುರಾಜ್, ಎಚ್.ವಿ.ಶಶಿರೇಖಾ, ಒ.ಮಂಜುನಾಥ, ಸುಧಾ ರವಿಕುಮಾರ್, ಎಚ್.ಆರ್.ಗೌರಮ್ಮ, ಚಂದ್ರಿಕಾ ಅತಿಥಿಗಳಾಗಿ ಭಾಗವಹಿಸುವರು.

ಕವಿಯತ್ರಿ ಜಯಾ ಪ್ರಾಣೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಮಹಿಳಾ ಕವಿಗೋಷ್ಠಿಯಲ್ಲಿ ರೀನಾ ವೀರಭದ್ರಪ್ಪ, ಶಿವಗಂಗಮ್ಮ ಚಿತ್ತಯ್ಯ, ಶಾರದಮ್ಮ ಗುರುಸ್ವಾಮಿ, ಎಂ.ಸರಸ್ವತಮ್ಮ, ಲತಾ ಕೊಂಡ್ಲಹಳ್ಳಿ, ಟಿ.ಸುಧಾಸ್ವಾಮಿ, ಶೋಭಾ, ಮಂಜುಳಾ ಉಮೇಶ್, ಸತ್ಯಭಾಮಾ, ಸಿ.ಕೆ.ಗೀತಾ ಕವಿತೆ ವಾಚಿಸುವರು.

ಜತೆಗೆ ಜನಪದ ನೃತ್ಯ ಮತ್ತು ಗಾಯನ, ಹಿಂದುಸ್ತಾನಿ ಸಂಗೀತ, ಸುಗಮ ಸಂಗೀತ, ಕನ್ನಡ ಗೀತಗಾಯನ, ವಚನ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net