ಬಿಜೆಪಿ ವಿರುದ್ಧ ರೈತರ ಆಕ್ರೋಶ

CLK RAITARU 08
Published on

ಚಳ್ಳಕೆರೆ: ರೈತ ಸಂಘಟನೆ ಹೋರಾಟಕ್ಕೆ ಅಂದಿನ ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಮಾಡಿದ ಅನುಕೂಲದ ಪ್ರತಿಫಲವಾಗಿ ವೇದಾವತಿ ನದಿಗೆ ವಿವಿ ಸಾಗರದ ನೀರು ಹರಿದು ಬಂದಿದೆ ಎಂದು ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇದಾವತಿ ನದಿಗೆ ಬ್ಯಾರೇಜ್ ನಿರ್ಮಾಣದ ಬಳಿಕ 0.25 ಟಿಎಂಸಿ ಅಡಿ ನೀರು ಹರಿಸುವ ಸಂಬಂಧ ಶಾಸಕ ಟಿ.ರಘುಮೂರ್ತಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಅವಕಾಶ ಮಾಡಿಕೊಡಲಾಗಿತ್ತು ಎಂದರು.

ಆದರೆ, ವೇದಾವತಿ ನದಿಗೆ ಬಾಗಿನ ಅರ್ಪಿಸುವ ವಿಚಾರವನ್ನೇ ರಾಜಕೀಯ ಮಾಡುತ್ತ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಬಿಜೆಪಿ ಮುಖಂಡರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ರೈತ ಸಂಘದ ಭೀಮಾರೆಡ್ಡಿ, ಒ.ಟಿ.ತಿಪ್ಪೇಸ್ವಾಮಿ, ಪಾಪಯ್ಯ, ಬಸಣ್ಣ, ಕ್ಯಾತಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net