ರೆಡ್ಡಿಹಳ್ಳಿಯಲ್ಲಿ ನೀರಿನ ವ್ಯವಸ್ಥೆ

CLK PALASHRUTHI 21
Published on

ಚಳ್ಳಕೆರೆ: ತಾಲೂಕಿನ ರೆಡ್ಡಿಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಪಿಡಿಒ ಶಶಿಕಲಾ ಭೇಟಿ ನೀಡಿ ಕುಡಿವ ನೀರಿನ ಎರಡು ಪ್ರತ್ಯೇಕ ನಲ್ಲಿ ವ್ಯವಸ್ಥೆ ಮಾಡಿದರು.

ಜಾನುವಾರುಗಳು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದ ತೊಟ್ಟಿಯಲ್ಲೇ ಜನ ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದರು. ಸಮಸ್ಯೆ ಕುರಿತು ವಿಜಯವಾಣಿಯಲ್ಲಿ ಸೋಮವಾರ ವರದಿ ಪ್ರಕಟಕಗೊಂಡಿತ್ತು. ಸ್ಪಂದಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಕಲ್ಪಿಸಲು ಬೋರ್‌ವೆಲ್‌ಗಳ ಆಧಾರವಿದೆ. ಆದರೆ, ವಿದ್ಯುತ್ ವ್ಯತ್ಯಯದಿಂದ ಮೋಟಾರ್‌ಗಳ ಪದೇಪದೇ ಸುಟ್ಟು ಹೋಗುತ್ತವೆ. ಇದರಿಂದ ಸ್ವಲ್ಪ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಪ್ರತಿ ಭಾಗಕ್ಕೂ ಸಾರ್ವಜನಿಕ ನಲ್ಲಿಗಳನ್ನು ಅಳವಡಿಸಲಾಗಿದೆ. ಕೆಲವರು ಮನೆಗಳಿಗೂ ಪ್ರತ್ಯೇಕ ನಲ್ಲಿ ಹಾಕಿಸಿಕೊಂಡಿದ್ದಾರೆ ಎಂದು ಪಿಡಿಒ ಶಶಿಕಲಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net