

ಚಳ್ಳಕೆರೆ: ಗ್ರಾಮ ದೇವರುಗಳ ಆರಾಧನೆಯಲ್ಲಿ ಪೂರ್ವಜರ ಸಂಪ್ರದಾಯ ಕಾಣುತ್ತಿದ್ದೇವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ರೆಡ್ಡಿಹಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಗಳ ಸುಭಿಕ್ಷೆಗಾಗಿ ಮತ್ತು ಜನ ಜಾನುವಾರುಗಳಿಗೆ ಯಾವುದೇ ರೋಗ ಬಾರದಿರಲೆಂದು ಪೂರ್ವಜರು ಗ್ರಾಮ ದೇವರುಗಳ ಆರಾಧನೆ ಮಾಡುತ್ತಿದ್ದರು. ಇದರಿಂದಾಗಿ ಹಳ್ಳಿಗಳಲ್ಲಿ ಶಾಂತಿ, ಸಾಮರಸ್ಯ, ಆರೋಗ್ಯ ಕಾಣಲಾಗುತ್ತಿತ್ತು. ಇದನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.
ಮುಖಂಡ ಟಿ.ಪ್ರಭುದೇವ್, ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ರೆಡ್ಡಿಹಳ್ಳಿ ಶಿವಣ್ಣ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ, ನಗರಸಭೆ ಸದಸ್ಯ ಎಚ್.ಪಿ.ವಿರೂಪಾಕ್ಷ, ತಾಪಂ ಸದಸ್ಯ ಜಿ.ವೀರೇಶ್ ಮತ್ತಿತರರಿದ್ದರು.