ನೀರು ಸರ್ಕಾರ ಮನವಿಗೆ ಮನ್ನಣೆ ನೀಡಿದೆ

CLK MLA 29
Published on

ಚಳ್ಳಕೆರೆ: ವಿವಿ ಸಾಗರದಿಂದ ಚಳ್ಳಕೆರೆ ಭಾಗದ ವೇದಾವತಿ ನದಿಗೆ ನಿರ್ದಿಷ್ಟವಾಗಿ 0.25 ಟಿಎಂಸಿ ಅಡಿ ನೀರು ಹರಿಸಲು ಸ್ಪಷ್ಟ ನಿರ್ದೇಶನ ಸಿಕ್ಕಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.

ಸಚಿವರು ಮತ್ತು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಿದ್ದೇನೆ. ತಾಲೂಕಿನ ರೈತರು ಮತ್ತು ಜನರು ಆತಂಕ ಪಡಬೇಕಾಗಿಲ್ಲ. ನಮಗೆ ಬರಬೇಕಾದ ನಿಗದಿತ 0.25 ಟಿಎಂಸಿ ಅಡಿ ನೀರು ಬರುವುದು ಖಚಿತ ಎಂದು ತಿಳಿಸಿದ್ದಾರೆ.

ಏ.23ರಂದು ಆರಂಭಗೊಂಡ ನೀರು 5 ದಿನಗಳ ಕಾಲ ಹರಿದರೂ 30 ಕಿ.ಮೀ. ಹಿರಿಯೂರು ಭಾಗದ ಹಳ್ಳ ಮತ್ತು ಚೆಕ್‌ಡ್ಯಾಂ ಗಳಿಗೆ ಸರಿಹೋಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net