ಭಗೀರಥನ ಅನುಗ್ರಹದಿಂದ ನೀರು

CLK JAYANTI 01
Published on

ಚಳ್ಳಕೆರೆ: ವಿವಿ ಸಾಗರದಿಂದ ವೇದಾವತಿ ನದಿಗೆ ಸರ್ಕಾರದ ಆದೇಶದಂತೆ ನೀರು ತರಲಾಗಿದೆಯೇ ಹೊರತು ಬೇರೆಯವರಿಗೆ ತೊಂದರೆ ಮಾಡುವ ರೀತಿ, ರಾಜಕೀಯ ಪ್ರೇರಿತ ಅಲ್ಲ ಎಂದು ಶಾಸಕ ಟಿ.ರಘುಮೂರ್ತಿ ಸ್ಪಷ್ಟಪಡಿಸಿದರು.

ನಗರದ ಶಾಸಕರ ಭವನದಲ್ಲಿ ಗುರುವಾರ ಉಪ್ಪಾರ ಸಮಾಜದ ಮುಖಂಡರೊಂದಿಗೆ ಆಚರಿಸಿದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿವಿ ಸಾಗರದಿಂದ ತಾಲೂಕಿಗೆ ಬರಬೇಕಿದ್ದ ನೀರನ್ನು ತಾಂತ್ರಿಕ ಅಡಚಣೆಯಿಂದ ತಡೆದು ನಿಲ್ಲಿಸಲಾಗಿತ್ತು. ಸರ್ಕಾರದ ಪರಿಷ್ಕೃತ ಆದೇಶದಂತೆ ನೀರು ಚಾಲನೆಗೆ ಮರು ಜೀವ ಸಿಕ್ಕಿದೆ. ಇದಕ್ಕೆ ಮಹರ್ಷಿ ಭಗೀರಥನ ಅನುಗ್ರಹ ಇದೆ ಎಂದರು.

ನಗರಸಭೆ ಸದಸ್ಯರಾದ ಆರ್.ಮಂಜುಳಾ, ಕೆ.ವೀರಭದ್ರಯ್ಯ, ಬಿ.ಟಿ.ರಮೇಶ್‌ಗೌಡ, ಟಿ.ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ಮುಖಂಡರಾದ ಎಲ್‌ಐಸಿ ರಂಗಸ್ವಾಮಿ, ಯಲ್ಲಪ್ಪ, ಎಸ್.ಎಚ್.ಸೈಯದ್, ನೇತಾಜಿ ಪ್ರಸನ್ನ, ಆರ್.ಪ್ರಸನ್ನಕುಮಾರ್, ಹನುಮಂತಪ್ಪ, ಬೋರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net