ರಾಮಾಯಣದ ಮೌಲ್ಯ ಸಂಜೀವಿನಿ ಇದ್ದಂತೆ

CTD VALMIKI
Published on

ಚಳ್ಳಕೆರೆ: ವಾಲ್ಮೀಕಿ ರಚಿಸಿದ ರಾಮಾಯಣದ ಮೌಲ್ಯಗಳು ಬದುಕಿನ ಸಾರ್ಥಕತೆಗೆ ಸಂಜೀವಿನಿ ಇದ್ದಂತೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ರಾಮಾಯಣ ಮಹಾಕಾವ್ಯದ ಬದುಕಿನ ವಿಶ್ಲೇಷಣೆ ಪ್ರತಿಯೊಬ್ಬರಿಗೂ ಸಾಮಾಜಿಕ ಅನುಭವ ನೀಡುತ್ತದೆ. ಬದಲಾಗುತ್ತಿರುವ ಸಮಾಜದಲ್ಲಿ ಮಾನವೀಯ ಸಂಬಂಧಗಳು ಕುಸಿಯುತ್ತಿವೆ. ಬೌದ್ಧಿಕ ಜಾಗೃತಿಗೆ ರಾಮಾಯಣ, ಮಹಾಭಾರತದಂತಹ ಸಾಹಿತ್ಯ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಕೆ.ವೀರಭದ್ರಯ್ಯ, ಬಿ.ಟಿ.ರಮೇಶ್‌ಗೌಡ, ಚಳ್ಳಕೆರೆಪ್ಪ, ಸಿ.ಕವಿತಾ, ಎಂ.ಕವಿತಾ, ಸುಮಕ್ಕ, ಸುಮಾ, ಸುಜಾತಾ, ಸಿ.ಬಿ.ಜಯಲಕ್ಷಿ ್ಮ, ಆರ್.ಪ್ರಸನ್ನಕುಮಾರ್, ಎಸ್.ಮುಜೀಬುಲ್ಲಾ, ಬಡಗಿ ಪಾಪಣ್ಣ, ದಳವಾಯಿ ಮೂರ್ತಿ, ಪ್ರಹ್ಲಾದ, ಭರಮಣ್ಣ, ತಾಪಂ ಸದಸ್ಯ ವೀರೇಶ್, ಶಿಕ್ಷಕರಾದ ಸೂರನಾಯಕ, ಸಿ.ಟಿ.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net