ರಾಜ್ಯಮಟ್ಟದ ಖೋಖೋ ಪಂದ್ಯಾವಳಿ

CLK SPORTS 01
Published on

ಚಳ್ಳಕೆರೆ: ನಗರದಲ್ಲಿ 18ನೇ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಖೋಖೋ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಶೋಕ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಸಿ.ವಿ.ರಮೇಶ್ ಹೇಳಿದರು.

ದಿವಂಗತ ಮಾಸ್ಟರ್ ಟಿ.ಸತ್ಯಪ್ಪ ಹಾಗೂ ಟಿ. ಪ್ಪೇಸ್ವಾಮಿ ಸ್ಮರಣಾರ್ಥ ಅಶೋಕ ಸ್ಪೋರ್ಟ್ಸ್ ಕ್ಲಬ್‌ನಿಂದ ಬಿಇಒ ಕಚೇರಿ ಸಮೀಪದ ಕ್ರೀಡಾಂಗಣದಲ್ಲಿ ಜ.3,4 ಹಾಗೂ 5ರಂದು ಮೂರು ದಿನಗಳ ಕಾಲ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು, ಮೈಸೂರು, ಹಾಸನ, ಹಾವೇರಿ ಸೇರಿ ವಿವಿಧ ಜಿಲ್ಲೆಗಳಿಂದ ತಂಡಗಳು ಈಗಾಗಲೇ ನೋಂದಣಿ ಮಾಡಿಸಿಕೊಂಡಿವೆ. ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಪ್ರೇಕ್ಷಕರಿಗೆ 3 ಸಾವಿರ ಆಸನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ, ಮಾಜಿ ಸಚಿವ ಡಿ.ಸುಧಾಕರ್ ಅವರು ಸಹಕಾರ ನೀಡಿದ್ದಾರೆ ಎಂದರು.

ಕ್ಲಬ್‌ನ ಖಜಾಂಚಿ ಪ್ರೊ.ಜೆ.ನಾಗಭೂಷಣ್, ಕಾರ್ಯದರ್ಶಿ ಎ.ನಾರಾಯಣರಾವ್, ಕೆ.ಮಂಜುನಾಥ್, ನಾರಾಯಣಮೂರ್ತಿ, ಕೆ.ಎಂ.ಯತೀಶ್, ಉಪನ್ಯಾಸಕ ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net