ಆರೋಗ್ಯದತ್ತ ಜಾಗ್ರತೆ ಇರಲಿ

CLK PAGADALABANDE 30
Published on

ಚಳ್ಳಕೆರೆ: ಅಂಗವಿಕಲರಲ್ಲಿ ಬದುಕಿನ ಉತ್ಸಾಹ ಕುಗ್ಗದೆ ಸದಾ ಕ್ರಿಯಾಶೀಲವಾಗಿರಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ಪಗಡಲಬಂಡೆ ಶಾಲಾ ಆವರಣದಲ್ಲಿ ಶಾಸಕರ ಸಹಾಯಾರ್ಥದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂಗವಿಕಲರ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್-19 ಜಾಗೃತಿಯಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಕಾಪಾಡಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ದೇಶದ ನೂರಾರು ಕೋಟಿ ಜನರಲ್ಲಿ ಯಾರಿಗೋ ಬರಲಿದೆ ಎಂಬ ನಿರ್ಲಕ್ಷ್ಯ ಸಲ್ಲದು ಎಂದರು.

ಗ್ರಾಪಂ ಸದಸ್ಯ ಜೆ.ತಿಪ್ಪೇಸ್ವಾಮಿ ಮಾತನಾಡಿದರು. ತಾಪಂ ಸದಸ್ಯರಾದ ಉಮಾ ಜನಾರ್ದನಾ, ಜಿ.ವೀರೇಶ್, ಗ್ರಾಪಂ ಅಧ್ಯಕ್ಷ ಕೆ.ಬೊಮ್ಮಲಿಂಗಪ್ಪ, ಉಪಾಧ್ಯಕ್ಷೆ ಉಮಾದೇವಿ, ಸದಸ್ಯರಾದ ಟಿ.ಸಿದ್ದಣ್ಣ, ಬಾಲನಾಗಮ್ಮ, ಮಾಂತಮ್ಮ, ಜಯಲಕ್ಷಿ ್ಮ, ಎಚ್.ಎಂ.ಮಹಾಂತೇಶ, ಪಿಡಿಒ ಮುತ್ತುರಾಜ್, ಟಿ.ದೇವರಾಜ್, ಜಿ.ಸಿದ್ದೇಶ್, ವೀರೇಂದ್ರ, ರಾಮದಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net