ಬೊಮ್ಮಲಿಂಗಪ್ಪ ಪಗಡಲಬಂಡೆ ಗ್ರಾಪಂ ಅಧ್ಯಕ್ಷ

K. BOMMALINGAPPA
Published on

ಚಳ್ಳಕೆರೆ: ತಾಲೂಕಿನ ಪಗಡಲಬಂಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕೆ. ಬೊಮ್ಮಲಿಂಗಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪುಟ್ಟಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೆ. ಬೊಮ್ಮಲಿಂಗಪ್ಪ ಮತ್ತು ಲಕ್ಷ್ಮೀದೇವಿ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮತದಾನ ನಡೆಯಿತು. 23 ಸದಸ್ಯ ಬಲದ ಪಂಚಾಯಿತಿಯಲ್ಲಿ ಬೊಮ್ಮಲಿಂಗಪ್ಪ 12 ಮತ ಪಡೆದು ಗೆಲುವು ಸಾಧಿಸಿದರೆ, ಲಕ್ಷ್ಮೀದೇವಿ 11 ಮತ ಪಡೆದರು ಎಂದು ಬಿಇಒ, ಚುನಾವಣಾಧಿಕಾರಿ ಸಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.

ಪಿಡಿಒ ಚಂದ್ರಕಲಾ, ಸಿಬ್ಬಂದಿ ಟಿ. ದೇವರಾಜ್, ಜಿ. ಸಿದ್ದೇಶ್, ಶ್ರೀಧರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net