ಆಕಸ್ಮಿಕ ಬೆಂಕಿಗೆ ಕಡ್ಲೆ ಬಣವೆ ಭಸ್ಮ

CLK BENKI 01
Published on

ಚಳ್ಳಕೆರೆ: ತಾಲೂಕಿನ ಯಾದಲಗಟ್ಟೆ ಹೊರವಲಯದಲ್ಲಿ ಭಾನುವಾರ ಆಕಸ್ಮಿಕ ಬೆಂಕಿ ತಗುಲಿ ರೈತರಾದ ಬಸಯ್ಯನವರ ಮೂಕಜ್ಜ, ದಾಸಯ್ಯನವರ ರಂಗಣ್ಣ ಎಂಬುವರ ಕಡ್ಲೆ ಹೊಟ್ಟಿನ ಬಣವೆಗಳು, ಎತ್ತಿನ ಬಂಡಿ ಸಂಪೂರ್ಣ ಸುಟ್ಟು ಹೋಗಿವೆ.

ಬೆಂಕಿಯಲ್ಲಿ ಸಿಲುಕಿಕೊಂಡ ಐದಾರು ಕುರಿ, ಮೇಕೆಗಳಿಗೆ ಸುಟ್ಟಗಾಯಗಳಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net