ಇಂದು ಕರಿಯಮ್ಮ ದೇಗುಲ ಉದ್ಘಾಟನೆ

CLK DEVALAYA 03
Published on

ಚಳ್ಳಕೆರೆ: ತಾಲೂಕಿನ ಕ್ಯಾತಗೊಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ಯಾತಗೊಂಡನಹಳ್ಳಿ, ದೊಡ್ಡ ಉಳ್ಳಾರ್ತಿ, ಕಾಲುವೇಹಳ್ಳಿ ಯಾದಲಗಟ್ಟೆ, ನಾಗಗೊಂಡನಹಳ್ಳಿ, ಗುಡಿಹಳ್ಳಿ, ಮೈಲನಹಳ್ಳಿಯ (ಏಳು ಊರಿನ) ಕರಿಯಮ್ಮ ದೇವಿ ದೇವಸ್ಥಾನ ಫೆ.4ರಂದು ಲೋಕಾರ್ಪಣೆಗೊಳ್ಳಲಿದೆ.

ದೇಗುಲ ಉದ್ಘಾಟನೆ ಪೂರ್ವಭಾವಿಯಾಗಿ ಸೋಮವಾರ ಕಂಕಣಧಾರಣೆ, ಕಳಸ ಮೆರವಣಿಗೆ, ಹವನ-ಹೋಮಾದಿ ಕಾರ್ಯಗಳು ಜರುಗಿದವು.

ಮಂಗಳವಾರ ದೇವಿಗೆ ಗಂಗಾಪೂಜೆ, ಕಳಸಾರೋಹಣ ಮಾಡುವ ಮೂಲಕ ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯದ ಲೋಕಾರ್ಪಣೆಗೊಳ್ಳಲಿದೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಎಂಎಲ್‌ಸಿ ಜಯಮ್ಮ ಬಾಲರಾಜ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಮ್ಮ, ಚಂದ್ರಿಕಾ ಶ್ರೀನಿವಾಸ್, ತಾಪಂ ಸದಸ್ಯರಾದ ಪಿ.ಶ್ರೀನಿವಾಸ, ಶಿವಮ್ಮ, ಸಾಕಮ್ಮ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net