

ಚಳ್ಳಕೆರೆ: ತಾಲೂಕಿನ 18 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಪರೀಕ್ಷೆ ಸುಗಮವಾಗಿ ನಡೆಯಿತು. 4773 ವಿದ್ಯಾರ್ಥಿಗಳಲ್ಲಿ 4727 ವಿದ್ಯಾರ್ಥಿಗಳು ಹಾಜರಾಗಿದ್ದರು.
99 ವಲಸೆ ವಿದ್ಯಾರ್ಥಿಗಳಲ್ಲಿ 92 ಜನ ಪರೀಕ್ಷೆ ಬರೆದರು. ಮೂರು ಮಂದಿ ಮುಖ್ಯ ಅಧೀಕ್ಷಕರು, 18 ಸ್ಥಾನಿಕ ಜಾಗೃತದಳ, 14 ಮೈಕ್ರೋ ಅಧೀಕ್ಷಕರು, 68 ಜನ ಪೊಲೀಸ್ ಸಿಬ್ಬಂದಿ, 76 ಜನ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಿದರು.