ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

CLK MANAVI 18
Published on

ಚಳ್ಳಕೆರೆ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಪ್ರಗತಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ವೀರಶೈವ ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ಬುಧವಾರ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ 2 ಕೋಟಿಗೂ ಅಧಿಕ ಸಮಾಜದ ಜನಸಂಖ್ಯೆ ಇದೆ. ಶೈಕ್ಷಣಿಕ ಮತ್ತು ಸಾಮಾಜಿಕ ಬದಲಾವಣೆಗೆ ನಿಗಮ ಸ್ಥಾಪನೆ ಅನಿವಾರ್ಯವಾಗಿದೆ. ಅಲ್ಲದೆ ವೀರಶೈವ ಲಿಂಗಾಯತ ಸಮುದಾಯದಲ್ಲಿ ನೂರಾರು ಒಳಪಂಗಡಗಳಿದ್ದು, ಇದರಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಅನುಕೂಲಕ್ಕಾಗಿ ನಿಗಮ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಳೆದ ಕಾಂಗ್ರೆಸ್ ಸರ್ಕಾರದಲ್ಲೇ ಈ ಬೇಡಿಕೆ ಇಡಲಾಗಿತ್ತು. ಈತ ಇದನ್ನು ಈಡೇರಿಸಲು ಬಿಜೆಪಿ ಸರ್ಕಾರ ಮುಂದಾಗಬೇಕು ಎಂದರು.

ವೇದಿಕೆ ಅಧ್ಯಕ್ಷ ವಿ.ಯೋಗೇಶ್ ಯಲಗಟ್ಟೆ, ಪದಾಧಿಕಾರಿಗಳಾದ ಜಿ.ವಿ.ವೀರೇಂದ್ರಯ್ಯ ಸ್ವಾಮಿ, ಶಿವಕುಮಾರ್, ಜಿ.ಕೆ.ಹರೀಶ್ ಕುಮಾರ್, ಎಂ.ಸಿ.ಮಂಜುನಾಥ್, ಚಂದ್ರಣ್ಣ, ಜಿ.ಎಸ್.ಅಂಬರೀಶ್, ಜಾನಮದ್ದಿ ಬಸವರಾಜ್, ಮರಿಕುಂಟೆ ರಾಘವೇಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net