ಕ್ಷೇತ್ರದ ಜನರಿಗೆ ಗೊತ್ತು ಸತ್ಯ

RAGHUMURTHY T MLA
Published on

ಚಳ್ಳಕೆರೆ: ಹೋರಾಟ ನಡೆಸುವುದು ಎಲ್ಲರ ಹಕ್ಕು. ಅದಕ್ಕೆ ರಾಜಕೀಯ ಬಣ್ಣ ಇರಬಾರದು. ಆದರೆ, ನನ್ನ ಮೇಲೆ ಜನರು ಇಟ್ಟಿರುವ ಪ್ರೀತಿ ಸಹಿಸಿಕೊಳ್ಳದೇ ಕೆಲವರು ಪಾದಯಾತ್ರೆ ನಡೆಸುತ್ತಿದ್ದಾರೆ ಶಾಸಕ ಟಿ.ರಘುಮೂರ್ತಿ ಬೇಸರ ವ್ಯಕ್ತಪಡಿಸಿದರು.

ನಗರದ ಭೋವಿ ವಿದ್ಯಾರ್ಥಿ ನಿಲಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಈಗಾಗಲೇ ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರನ್ನು ವೇದಾವತಿ ನದಿ ಭಾಗಕ್ಕೆ ಕುಡಿಯುವ ನೀರಿಗಾಗಿ ಹರಿಸಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಹಂತದಲ್ಲಿ ದಾಖಲೆ ಸಹಿತ ಮನವರಿಕೆ ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ನೀರು ಹರಿಯುವ ಕೆಲಸವಾಗಲಿದೆ.

ನೀರು ಹರಿದರೆ ಶಾಸಕರಿಗೆ ಹೆಸರು ಬರಲಿದೆ ಎಂದು ಈ ರೀತಿ ಕುಟಿಲ ತಂತ್ರ ನಡೆಸುತ್ತಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ವೇದಾವತಿ ನದಿ ಭಾಗದ ಜಲ ಸಂರಕ್ಷಣಾ ಕಾರ್ಯಗಳಿಗೆ ನಾನು ಶ್ರಮಿಸಿರುವ ಸತ್ಯ ಜನರಿಗೆ ಗೊತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net