ಚರಂಡಿ ವ್ಯವಸ್ಥೆ ಕಲ್ಪಿಸಲು ಮನವಿ

CLK GRAMA 22
Published on

ಚಳ್ಳಕೆರೆ: ಚರಂಡಿ ವ್ಯವಸ್ಥೆ ಮಾಡಿ ತ್ಯಾಜ್ಯ ನೀರು ರಸ್ತೆಗೆ ಹರಿಯುವುದನ್ನು ತಡೆಯಬೇಕೆಂದು ತಾಲೂಕಿನ ಯಾದಲಗಟ್ಟೆ ಗ್ರಾಮಸ್ಥರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ಮಳೆ ಹಾಗೂ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಅಲ್ಲದೆ ಬಹುತೇಕ ಕಡೆ ಚರಂಡಿಗಳನ್ನು ಮುಚ್ಚಿಹಾಕಿ ಅದರ ಮೇಲೆ ಶೌಚಗೃಹ ನಿರ್ಮಿಸಿದ್ದರಿಂದ ನೀರೆಲ್ಲ ರಸ್ತೆಯಲ್ಲಿ ನಿಲ್ಲುತ್ತಿದೆ. ಇದರಿಂದ ಸೊಳ್ಳೆ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗಭೀತಿ ಎದುರಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ನವಯುವ ಜಾಗೃತಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್, ಗ್ರಾಮಸ್ಥರಾದ ಭೀಮಣ್ಣ, ಆಂಜನೇಯ, ನಾಗಭೂಷಣ, ಶಶಿ, ಮಹಾಂತೇಶ್ ಒತ್ತಾಯಿಸಿದ್ದಾರೆ.

ಕಾಲುವೇಹಳ್ಳಿ ಗ್ರಾಪಂ ಪಿಡಿಒ ಎಚ್.ಎಲ್.ಬಸವರಾಜ್ ಹೇಳಿಕೆ: 2018-19ರ ಕ್ರಿಯೆ ಯೋಜನೆಗೆ ಗ್ರಾಮದ ಕಾಮಗಾರಿಗಳು ಸೇರ್ಪಡೆ ಇರಲಿಲ್ಲ. 2019-20ರ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ. ಈಗಾಗಲೇ ತಾತ್ಕಾಲಿಕವಾಗಿ ಮಣ್ಣು ಹಾಕಿ ರಸ್ತೆ ತಗ್ಗುಗಳನ್ನು ಮುಚ್ಚಲಾಗಿದೆ. ಚರಂಡಿ ಮತ್ತು ಸಿಸಿ ರಸ್ತೆಗಳ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net